ಶಿವಮೊಗ್ಗ: ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂ. ಹಣ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಸ್, ಕೋಲ್ಕತ್ತಾ ಮೂಲದ ರಿತೇಶ್ ಎಂಬ ವ್ಯಕ್ತಿಯೊಬ್ಬ ಭದ್ರಾವತಿಯ ಭೂತನಗುಡಿ ನಿವಾಸಿ ರಫಿಕ್ ಅಹಮದ್ ಎಂಬುವವರ ಮಗನಿಗೆ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ 6 ಲಕ್ಷ ರೂ. ನೀಡಬೇಕು ಎಂದು ಕೂಡ ಹೇಳಿದ್ದನಂತೆ. ಇದಕ್ಕೆ ಮುಂಗಡವಾಗಿ ಒಂದು ಲಕ್ಷ ರೂ. ಯನ್ನು ತನ್ನ ಖಾತೆಗೆ ಹಾಕುವಂತೆ ತಿಳಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೋಲ್ಕತ್ತಾ ಬ್ರಾಂಚ್ನ ಖಾತೆ ವಿವರ ಒದಗಿಸಿದ್ದ. ಇದಕ್ಕಾಗಿ ತನ್ನ ಕೊಲ್ಕತ್ತಾ ಮೂಲದ ಬ್ಯಾಂಕ್ನ ಚೆಕ್ ಫೋಟೋ ಕೂಡ ಕಳಿಸಿದ್ದ.
ಇನ್ನೂ ಹಣ ಪಡೆದ ಕೋಲ್ಕತ್ತಾದ ರಿತೇಷ್ ಅಗರ್ವಾಲ್ ಎಂಬಾತ ಕೊನೆಗೆ ರಫಿಕ್ ಅಹಮದ್ ಅವರ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ಆತಂಕಗೊಂಡ ರಫಿಕ್ ಅಹಮದ್ ಅವರೀಗ ದೂರು ನೀಡಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇವಲ ಫೋನಿನಲ್ಲೇ ಯಾಮಾರಿಸಿ 1 ಲಕ್ಷ ರೂ. ಹಣ ಪೀಕಿರುವ ವ್ಯಕ್ತಿ, ಮೊದಲು ಮೆಡಿಕಲ್ ಕಾಲೇಜಿಗೆ ಸೀಟು ಕೊಡಿಸುವ ಬಗ್ಗೆ ಎಸ್.ಎಂ.ಎಸ್. ಕಳಿಸಿದ್ದ. ಇದನ್ನ ನಂಬಿದ ರಫೀಕ್ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದಕ್ಕಾಗಿ ಕೇವಲ ಫೋನಿನಲ್ಲೇ ಮಾತುಕತೆ ನಡೆಸಿದ್ದ ಅಷ್ಟೇ. ಬಳಿಕ ಮೆಡಿಕಲ್ ಕಾಲೇಜು ಸೀಟ್ ಗಾಗಿ 6 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದನಂತೆ. ಮುಂಗಡವಾಗಿ ಒಂದು ಲಕ್ಷ ರೂ. ತನ್ನ ಖಾತೆಗೆ ಹಾಕುವಂತೆ ತಿಳಿಸಿದ್ದ.ಅವರು ಮೇಲೆ ಅನುಮಾನ ಬಂದ ಬಳಿಕವಷ್ಟೇ ರಫೀಕ್ ಅವರು ತಮ್ಮ ಮಗನಿಗೆ ಹೇಳಿ ಆತನ ಕಾಲ್ ರೆಕಾರ್ಡ್ ಮಾಡಿಸಿದ್ದಾರೆ.