ಇಲಾಖೆ ಅಧಿಕಾರಿಗಳ ಸಭೆ ಕರೆದ ಗೃಹಸಚಿವ ಎಂ.ಬಿ. ಪಾಟೀಲ್

0
132

ಬೆಂಗಳೂರು: ಐಎಂಎ ವಂಚನೆ ಪ್ರಕರಣ ಕಾವೇರುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಎಂ. ಬಿ. ಪಾಟೀಲ್​ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಹಣಕಾಸು ಅಪರಾಧಗಳ ಬಗ್ಗೆ ಚರ್ಚೆ ನಡೆಯಲಿದೆ. ನಗರ ಪೊಲೀಸ್ ಆಯುಕ್ತರು, ಸಿಸಿಬಿ ಅಧಿಕಾರಿಗಳು ಸೇರಿ ಇಲಾಖೆ ಪ್ರಮುಖರ ಸಭೆ ನಡೆಯಲಿದ್ದು, ಆರ್ಥಿಕ ಅಪರಾಧ ತಡೆಗಟ್ಟುವುದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಸಭೆಗೆ ಬರುವಂತೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಿಜಿ ಐಜಿಗೂ ಸೂಚನೆ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಗೃಹ ಸಚಿವ ಎಂ.ಬಿ. ಪಾಟೀಲ್​ ಸಭೆ ಆಯೋಜನೆ ಮಾಡಿದ್ದಾರೆ.

ಗೃಹ ಸಚಿವರಿಗೆ ಕಳೆದ ಫೆಬ್ರವರಿಯಲ್ಲೇ ಪವರ್​ ಟಿವಿ ಐಎಂಎ ವಂಚನೆ ಬಗ್ಗೆ ಮಾಹಿತಿ ಕೊಟ್ಟಿತ್ತು. ಪವರ್ ಟಿವಿಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, “ಇಂತಹ ಕಂಪನಿಗಳಿಗೆ ನಾವು ಶಾಶ್ವತ ಕಡಿವಾಣ ಹಾಕಬೇಕು. ಎಲ್ಲಾ ಪ್ರಕರಣಗಳ ಕುರಿತು ಚರ್ಚಿಸುತ್ತೇನೆ. ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಒಂದು ಉನ್ನತ ಮಟ್ಟದ ಕಮಿಟಿಯನ್ನು ರಚಿಸುತ್ತೇವೆ. ಈ ಕೇಸ್​​ಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ಮಾಡುತ್ತೇನೆ” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here