Tuesday, September 27, 2022
Powertv Logo
Homeಸಿನಿಮಾಅಮೆರಿಕಾದಲ್ಲಿ ಮೋಡಿ ಮಾಡಲು ರೆಡಿಯಾದ ‘ಮಾಯಾಬಜಾರ್‘

ಅಮೆರಿಕಾದಲ್ಲಿ ಮೋಡಿ ಮಾಡಲು ರೆಡಿಯಾದ ‘ಮಾಯಾಬಜಾರ್‘

ಪಿಆರ್​ಕೆ ಬ್ಯಾನರ್ ಅಡಿಯಲ್ಲಿ  ನಿರ್ಮಾಣವಾಗಿರುವ 2ನೇ ಚಿತ್ರ ‘ಮಾಯಾಬಜಾರ್ 2016‘  ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರತಂಡ ಇನ್ನೊಂದು ಸಿಹಿ ಸುದ್ದಿಯನ್ನು ನೀಡಿದೆ.  ಇದೇ ಮಾರ್ಚ್ 6 ರಂದು ಮಾಯಾಬಜಾರ್ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.

ಅಮೆರಿಕಾದ ‘ಸಾತ್‘ ಕೊರಿಯೋಗ್ರಫಿ ತಂಡ ‘ಮಾಯಾಬಜಾರ್‘ ಚಿತ್ರದ ಟೈಟಲ್ ಟ್ರ್ಯಾಕ್​ಗೆ ಸ್ಟೆಪ್ಸ್ ಹಾಕಿರುವ ವಿಡಿಯೋವನ್ನು  ಚಿತ್ರದ ನಿರ್ಮಾಪಕ ಪುನೀತ್ ರಾಜ್​ಕುಮಾರ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ  ಸಿನಿಮಾ ಮಾರ್ಚ್ 6 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. 

‘ಮಾಯಾಬಜಾರ್ 2016‘ ಸಿನಿಮಾ ಪುನೀತ್ ರಾಜ್​ಕುಮಾರ್ ಪಿಆರ್​ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸುತ್ತಿರುವ ಎರಡನೇ ಸಿನಿಮಾವಾಗಿದೆ. ಇನ್ನು ನೋಟು ಅಮಾನ್ಯೀಕರಣದ ಸುತ್ತ ಸಿನಿಮಾದ ಕಥೆ ಹೆಣೆಯಲಾಗಿದ್ದು, ಈ ಚಿತ್ರ  ರಾಧಾಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದೆ. ತಾರಾಗಣದಲ್ಲಿ  ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಸಿಷ್ಠ ಸಿಂಹ,  ಸುಧಾರಾಣಿ, ಸಾಧು ಕೋಕಿಲ ಹಾಗೂ ಅಚ್ಚ್ಯುತ್ ಕುಮಾರ್  ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

- Advertisment -

Most Popular

Recent Comments