ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ

0
168

ಬೆಂಗಳೂರು : ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ (73) ಅವರು ಲಿಂಗೈಕ್ಯರಾಗಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು, ಕಳೆದ ಒಂದುವಾರದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಲಿಂಗೈಕ್ಯರಾಗಿದ್ದಾರೆ.
ಮಾತೆ ಮಹಾದೇವಿ ಅವರು ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು. 1946ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದರು. ಇವರ ತಂದೆ ಬಸಪ್ಪ, ತಾಯಿ ಗಂಗಮ್ಮ. ಮಹಾದೇವಿ ಅವರ ಬಾಲ್ಯದ ಹೆಸರು ರತ್ನಾ ಅಂತ. ತನ್ನ 19ನೇ ವರ್ಷದಲ್ಲಿ ಆದ್ಯಾತ್ಮದತ್ತ ನಡೆದ ಮಾತೆ ತತ್ವಶಾಸ್ತ್ರ ಪದವೀಧರರು.
ಲಿಂಗಾನಂದ ಶ್ರೀಗಳಿಂದ ಲಿಂಗದಿಕ್ಷೆ ಪಡೆದ ಮಾತೆ 1970ರಲ್ಲಿ ಮಹಿಳಾ ಜಗದ್ಗುರುವಾಗಿ ಪಟ್ಟ ಸ್ವೀಕರಿಸಿದರು. 1987ರಲ್ಲಿ ಬಸವಧರ್ಮ ಪೀಠ ಸಂಸ್ಥೆ ನೋಂದಣಿ ಮಾಡಿದ್ರು. ಬಳಿಕ 1992ರಲ್ಲಿ ಬಸವ ಧರ್ಮ ಪೀಠ ಸ್ಥಾಪಿಸಿದ್ದರು. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲೂ ಬಸವ ಧರ್ಮ ಪೀಠ ಸ್ಥಾಪಿಸಿದ್ದಾರೆ.

LEAVE A REPLY

Please enter your comment!
Please enter your name here