ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯ

0
74

ಕಲಬುರಗಿ : ಸೇಡಂ ತಾಲ್ಲೂಕಿನ ಯಾನಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನವರು ಕಳೆದ ಶಿವರಾತ್ರಿಯಂದು ಕೊನೆಯಬಾರಿ ದರ್ಶನ ನೀಡಿದ್ದರು. ಅವರು ಜಿಲ್ಲೆಯಲ್ಲಿ ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದರು.
ಮಾಣಿಕೇಶ್ವರಿ ಮಾತಾಜಿ ಹುಟ್ಟಿದ್ದು 1943ರ ಜುಲೈ 27ರಲ್ಲಿ. ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬಸಮ್ಮ ಬುಗ್ಗಪ್ಪ ದಂಪತಿಯ ಮಗಳಾಗಿ ಹುಟ್ಟಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಅನ್ನ ನೀರು ಇಲ್ಲದೇ ನಿರಾಹಾರಿಯಾಗಿದ್ದ ಮಾತಾಜಿ, ವರ್ಷಾನುಗಟ್ಟಲೇ ತಪಸ್ಸಿನಲ್ಲಿ ಕೂಡುತ್ತಿದ್ದರು. ಗವಿಯೊಳಗೆ ವಾಸವಾಗಿದ್ದರು. ಹಾಲು ಮಾತ್ರ ಸ್ವೀಕರಿಸುತ್ತಿದ್ದರು. ಶಿವರಾತ್ರಿಯಂದು ಗುಹೆಯಿಂದ ಹೊರ ಬಂದು ಗುಡ್ಡದ ಮೇಲೆ ಕುಳಿತು ದರ್ಶನ ನೀಡುತ್ತಿದ್ದರು.

LEAVE A REPLY

Please enter your comment!
Please enter your name here