Home ಸಿನಿ ಪವರ್ ಮಾಡೆಲಿಂಗ್ ಕ್ಷೇತ್ರದಲ್ಲಿ ಟಾಪ್ ಸ್ಥಾನ ಅಲಂಕರಿಸಿದ ಕನ್ನಡದ ಕಂದ ಓಂ

ಮಾಡೆಲಿಂಗ್ ಕ್ಷೇತ್ರದಲ್ಲಿ ಟಾಪ್ ಸ್ಥಾನ ಅಲಂಕರಿಸಿದ ಕನ್ನಡದ ಕಂದ ಓಂ

ಬೆಂಗಳೂರು : ಮಾಸ್ಟರ್ ಓಂ ಇದೀಗ ದಕ್ಷಿಣ ಭಾರತದ ಫ್ಯಾಷನ್ ಕ್ಷೇತ್ರದಲ್ಲಿ ಟಾಪ್ ಒನ್ ಸ್ಥಾನ ಅಲಂಕರಿಸಿರುವ ಮೊದಲ ಕನ್ನಡಿಗ.
ಕರ್ನಾಟಕ ಫ್ಯಾಷನ್ ಫೆಸ್ಟಿವಲ್ ವೀಕ್​​ನಲ್ಲಿ ನಾಲ್ಕನೇ ಸೀಸನ್​ಗೂ ಮುಂದುವರೆದ ಬ್ರಾಂಡ್ ಅಂಬಾಸಡರ್ ಮಾತ್ರವಲ್ಲ, ದಕ್ಷಿಣ ಭಾರತದ ಟಾಪ್ ಕಿಡ್ ಮಾಡೆಲ್​​ನ ಮೊದಲ ಸ್ಥಾನ ಅಲಂಕರಿಸಿದ್ದಾನೆ.
ಬೆಂಗಳೂರಿನ ಎಲಿಮೆಂಟ್ಸ್ ಮಾಲ್ನಲ್ಲಿ ನಡೆದ ಕೆಎಫ್ಎಫ್ಡಬ್ಲ್ಯೂನಲ್ಲಿ 4 ನೇ ಸೀಸನ್ನಲ್ಲೂ ಸಿಲೆಬ್ರಿಟಿ ಬ್ರಾಂಡ್ ಅಂಬಾಸಡರ್ ಆಗಿ ರ‍್ಯಾಂಪ್​​ ವಾಕ್ ಮಾಡಿದ ಮಾಸ್ಟರ್ ಓಂಗೆ ಮಿಸೆಸ್ ಸೌತ್ ಇಂಡಿಯಾ ಕ್ವೀನ್, ಫಿಟ್ನೆಸ್ ದಿವಾ ಹಾಗೂ ಕಿಡ್ಸ್ ಗ್ರೂಮಿಂಗ್ ಸ್ಪೆಷಲಿಸ್ಟ್ ಜ್ಯೋತ್ಸ್ನಾ ಅವರು ಫಲಕ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಇದುವರೆಗೂ ಕರ್ನಾಟಕ ಸೂಪರ್ ಕಿಡ್ ಮಾಡೆಲ್ ಹಾಗೂ ಸ್ಯಾಂಡಲ್​​ವುಡ್​ ಬಾಲನಟನಾಗಿದ್ದ ಮಾಸ್ಟರ್ ಓಂ ಇದೀಗ ಒಂದು ಹೆಜ್ಜೆ ಮುಂದಿರಿಸಿದ್ದಾನೆ. ಸೌತ್ ಇಂಡಿಯಾದ ಕಿಡ್ ಮಾಡೆಲ್​ಗಳಲ್ಲಿ ಟಾಪ್​ ಸ್ಥಾನ ಅಲಂಕರಿಸಿದ್ದಾನೆ. ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾನೆ.
ಫ್ಯಾಷನ್ ಕ್ಷೇತ್ರದಲ್ಲಿಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿ ಇದ್ದಾನೆ. ಈಗಾಗಲೇ 35 ಜಾಹೀರಾತು ಹಾಗೂ 8 ಸಿನಿಮಾಗಳಲ್ಲಿ ನಟಿಸಿರುವ ಓಂ ಜಗ್ಗೇಶ್ ಮುಖ್ಯಭೂಮಿಯಲ್ಲಿ ಅಭಿನಯಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲೂ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ರಿಲೀಸ್​ ಆಗಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಕೊರೋನಾ ಸೋಂಕಿತ ಎಸ್ಕೇಪ್..!

ಹುಬ್ಬಳ್ಳಿ : ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯೊಬ್ಬ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಕಳ್ಳತನ ಆರೋಪದಲ್ಲಿ ಉಪನಗರ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಪಿ. 14537 ರೋಗಿಯಾಗಿ ಕಿಮ್ಸ್ ನಲ್ಲಿ...

ಬೀದಿಗೆ ಬಂತು ಬಿಜೆಪಿ ಆಂತರಿಕ ಒಳಜಗಳ

ರಾಮನಗರ : ಬಿಜೆಪಿ ಜಿಲ್ಲಾಧ್ಯಕ್ಷ ಬದಲಾವಣೆ ಬೆನ್ನಲ್ಲೇ ಜಿಲ್ಲಾ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರೆಚಾಟ ಆರಂಭವಾಗಿದೆ. ಚನ್ನಪಟ್ಟಣದಲ್ಲಿರುವ ನೂತನ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಅವರು ಮನೆ ಎದುರು ಮಾಜಿ...

ಜನರೆದುರೇ ಜನಪ್ರತಿನಿಧಿಗಳ ಕಿತ್ತಾಟ!

ತುಮಕೂರು: ಜಿಲ್ಲೆಯ ತಿಪಟೂರು ಶಾಸಕ ಬಿ.ಸಿ.ನಾಗೇಶ್ ನಗರ ಸಭಾ ಸದಸ್ಯ ಯೋಗೇಶ್ ನಡುವೆ ಮಾರಾಮಾರಿ ನಡೆದಿದೆ. ತಿಪಟೂರು ನಗರದ ವಿದ್ಯಾನಗರದ 14 ನೇ ವಾಡ್೯ ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ಈ ಘಟನೆ...

ಮಹಿಳಾ ಪೇದೆಗೆ ಪಾಸಿಟಿವ್ ರೈಲ್ವೇ ಪೋಲಿಸ್ ಠಾಣೆ ಸೀಲ್ ಡೌನ್

ವಿಜಯಪುರ :  ರೈಲ್ವೇ ಪೋಲಿಸ್ ಠಾಣೆಯಲ್ಲಿ ಮಹಿಳಾ ಪೇದೆಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಪೋಲಿಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಪೆಷೇಂಟ್ ನಂಬರ್ 14483, 26 ವರ್ಷದ ಮಹಿಳಾ ಪೇದೆ ಎಂದು ಗುರುತಿಸಲಾಗಿದೆ....