Thursday, October 6, 2022
Powertv Logo
Homeರಾಜ್ಯಮಹಿಳೆಯರಿಗೆ ಕಷ್ಟ ಕಾಲದಲ್ಲಿ ಕೈ ಹಿಡಿದ‌ ಮಾಸ್ಕ್ ತಯಾರಿಕೆ

ಮಹಿಳೆಯರಿಗೆ ಕಷ್ಟ ಕಾಲದಲ್ಲಿ ಕೈ ಹಿಡಿದ‌ ಮಾಸ್ಕ್ ತಯಾರಿಕೆ

ದೊಡ್ಡಬಳ್ಳಾಪುರ : ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು ಇದ್ರಿಂದ ಅದೆಷ್ಟೋ ಜನರು ಉದ್ಯೋಗಗಳನ್ನು ಕಳೆದುಕೊಂಡರು. ಈಗಲೂ ಉದ್ಯೋಗ ಇಲ್ಲದೇ ಪರದಾಟ ಅನುಭವಿಸುತ್ತಿದ್ದಾರೆ. ಜೀವನದ ಬಂಡಿ ಸಾಗಿಸಲು ಹರಸಾಹಸ ಪಡುವ ಸ್ಥಿತಿ ಉಂಟಾಗಿದೆ. ಆದ್ರೆ ಇಲ್ಲೊಂದು ಮಹಿಳಾ ತಂಡ ತಾವೇ ಉದ್ಯೋಗ ಸೃಷ್ಟಿ ಮಾಡಿಕೊಂಡು ಸಂಪಾದನೆಯ ಹಾದಿ ಹಿಡಿದುಕೊಂಡಿದ್ದಾರೆ. ಕೃಷಿ ಇಲಾಖೆಯ ಜಲಾನಯನ ಯೋಜನೆ ಯಲ್ಲಿ ಸಾಲ ಪಡೆದುಕೊಂಡು ಮಾಸ್ಕ್ ತಯಾರಿಕೆ ಗೆ ಬಂಡವಾಳ ಹಾಕಿ ತಾವೇ ಉದ್ಯೋಗ ಮಾಡಿ ಸಂಪಾದನೆ ಮಾಡುತ್ತಿದ್ದಾರೆ.. ಕೊರೊನಾ ವೈರಸ್ ದೇಶಾದ್ಯಂತ ಇರುವ ಕಾರಣ ಮಾಸ್ಕ್ ಗಳಿಗೆ ಸಾಕಷ್ಟು ಬೇಡಿಕೆ ಇದ್ದು ಉತ್ತಮ ಲಾಭ ಸಹ ಪಡೆಯುತ್ತಿದ್ದಾರೆ.. ಇನ್ನೂ ಮನೆಯಲ್ಲಿ ತಯಾರಾಗುವ ಮಾಸ್ಕ್​ಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಮಹಿಳಾ ತಂಡ ಚುರುಕಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗೆ ಮಾಸ್ಕ್ ತಯಾರಿಕೆಯಲ್ಲಿ ಕೆಲಸ ಸೃಷ್ಟಿ ಮಾಡಿಕೊಂಡಿರುವ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಂಬಲಗೆರೆ ಮತ್ತು ಪುರುಷನಹಳ್ಳಿಯಲ್ಲಿದೆ.. ಲಾಕ್ ಡೌನ್ ನಂತರ ಕೆಲಸ ಸಿಗದ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗಸೂಚಿಯಂತೆ ಈ ರೀತಿ ಉದ್ಯೋಗ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ.

- Advertisment -

Most Popular

Recent Comments