Saturday, October 1, 2022
Powertv Logo
Homeಈ ಕ್ಷಣಟ್ರಯಲ್ಸ್‌ಗೆ ಮೇರಿ ಗೈರು

ಟ್ರಯಲ್ಸ್‌ಗೆ ಮೇರಿ ಗೈರು

ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರು ಮುಂಬರುವ ಐಬಿಎ ಎಲೈಟ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮತ್ತು 2022ರ ಏಷ್ಯನ್ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

ಹಿರಿಯ ಬಾಕ್ಸರ್ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ​ 2022ರ ಕಾಮನ್​ವೆಲ್ತ್​ ಗೇಮ್ಸ್​ಗೆ ಸಿದ್ಧತೆ ನಡೆಸುವುದರ ಕಡೆಗೆ ತಮ್ಮ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪೀಳಿಗೆಯ ಬಾಕ್ಸರ್​ಗಳು ತಮ್ಮನ್ನು ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡುವುದಕ್ಕಾಗಿ ಮತ್ತು ಮೇಜರ್​ ಟೂರ್ನಮೆಂಟ್​ಗಳಲ್ಲಿ ಮಾನ್ಯತೆ ಮತ್ತು ಅನುಭವವನ್ನು ಪಡೆಯಲು ಅನುಕೂಲವಾಗಲೆಂದು ಈ ಟೂರ್ನಮೆಂಟ್​ಗಳಿಂದ ನಾನು ಹಿಂದೆ ಸರಿಯಲು ಬಯಸಿದ್ದೇನೆ ಮತ್ತು ಮುಂಬರುವ ಕಾಮನ್​ವೆಲ್ತ್​ ಗೇಮ್ಸ್​​ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೇನೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾಗೆ ಕೋಮ್​ ಮಾಹಿತಿ ನೀಡಿದ್ದಾರೆ.

- Advertisment -

Most Popular

Recent Comments