ನೀವು ಟ್ರಾಫಿಕ್ ಸಮಸ್ಯೆಗೆ ಗುಡ್​ ಬೈ ಹೇಳಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದು…!

0
399

ದೊಡ್ಡ ಸಿಟಿಗಳಲ್ಲಿ ಟ್ರಾಫಿಕ್​ನಿಂದಾಗಿ ಆಕಡೆ ಈಕಡೆ ಓಡಾಡುವುದೇ ಕಷ್ಟವಾಗಿದೆ. ಕೆಲಸಗಳಿಗೆ ಬೇಗ ಹೋಗಬೇಕು ಅಂದುಕೊಂಡವರು ಹೋಗೋದು ಲೇಟಾಗಿ ಬಿಡುತ್ತೆ. ಆಗೆಲ್ಲಾ ಎಲ್ಲರೂ ನಮಗೂ ಹಕ್ಕಿಗಳಂತೆ ರೆಕ್ಕೆಗಳು ಇರ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಒಂದು ಕ್ಷಣ ಯೋಚನೆ ಮಾಡದವರೇ ಇರಲ್ಲ. ಈ ರೀತಿ ಯೋಚನೆ ಮಾಡೋರೆಲ್ಲಾ ಇನ್ನುಮುಂದೆ ಹಕ್ಕಿಯಂತೆ ಹಾರಿಕೊಂಡು ಹೋಗಬಹುದು.

ಹೌದು, ಇದೀಗ ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೆ ನಾವು ಹಕ್ಕಿಯಂತೆ ಹಾರುವ ಕಾಲ ಬಂದಿದೆ. ಅದು ಹೇಗೆ ಅಂತಿರಾ? ‘ಮಾರ್ವಲ್ ಮ್ಯಾನ್’ ಸ್ಯಾಮ್  ರೋಜರ್ಸ್ ಅಭಿವೃದ್ಧಿ ಪಡಿಸಿರೋ ಜೆಟ್ ಸೂಟ್ ಧರಿಸಿ ನೀವೂ ಕೂಡ ಹಾರಾಡ್ಕೊಂಡು ಹೋಗಬಹುದು. ಇದು ಒಂದು ಗಂಟೆಗೆ  80 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈಗಾಗಲೇ ಇದರ ಪ್ರಯೋಗ ಯಶಸ್ವಿಯಾಗಿದೆ.

ಸ್ಯಾಮ್ ರೋಜರ್ಸ್ ಇಂಗ್ಲೆಂಡ್ ಲೌಬರೋ ವಿಶ್ವವಿದ್ಯಾಲಯದ  ವಿದ್ಯಾರ್ಥಿ ಹಾಗೂ ಗ್ರಾವಿಟಿ ಇಂಡಸ್ಟ್ರೀಸ್​ನಲ್ಲಿ ಜೆಟ್ ಸೂಟ್ ಪೈಲಟ್. ಈ ಜೆಟ್ ಸೂಟನ್ನು 5 ಸಣ್ಣ ಟರ್ಬೊ ಜೆಟ್ ಇಂಜಿನ್​ನಿಂದ ತಯಾರಿಸಲಾಗಿದ್ದು, ಇದರಲ್ಲಿ 3ಡಿ  ಪ್ರಿಟಿಂಗ್ ತಂತ್ರಜ್ಞಾನವನ್ನು ಬಳಸಿದ್ದಾರೆ. ಅಲ್ಲದೆ  ಅಲ್ಯೂಮಿನಿಯಂ, ಸ್ಟಿಲ್ ನೈಲಾನ್​ ಬಳಸಲಾಗಿದ್ದು, ಸೀಮೆ ಎಣ್ಣೆಯಿಂದ ಈ ಜೆಟ್ ಕೆಲಸ ಮಾಡಲಿದೆ. ಈ ಸೂಟ್​ನ ಬೆಲೆ 4,40,000 ಡಾಲರ್ ಆಗಿದ್ದು, ಈಗಾಗಲೇ 10 ಸೂಟ್​ಗಳನ್ನು ಸೇಲ್ ಮಾಡಿದೆ.

ರೋಜರ್ಸ್ ಅಭಿವೃದ್ಧಿಪಡಿಸಿದ ಜೆಟ್ ಸೂಟ್ ಮಾನವ ಏರೋನಾಟಿಕಲ್​ನಲ್ಲಿ ವೇಗದಲ್ಲಿ ಗಿನ್ನೆಸ್ ದಾಖಲೆ ಮಾಡಿದೆ. ಇದರ ಕಾರ್ಯಕ್ಷಮತೆಯನ್ನು ನ್ಯಾಶ್ವಿಲ್ಲೆಯಲ್ಲಿ ನಡೆದ ಡಸಾಲ್ಟ್ ಸಿಸ್ಟಮ್​ನ 3ಡಿ ಎಕ್ಸ್​ಪೀರಿಯನ್ಸ್ ವರ್ಲ್ಡ್ ಕಾನ್ಫರೆನ್ಸ್​ನಲ್ಲಿಯೂ ಪ್ರದರ್ಶಿಸಲಾಗಿದೆ.

 

LEAVE A REPLY

Please enter your comment!
Please enter your name here