Saturday, October 1, 2022
Powertv Logo
Homeದೇಶರಾಷ್ಟ್ರ ಪಿತಾಮಹನ 71ನೇ ಪುಣ್ಯಸ್ಮರಣೆ: ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಪಣೆ

ರಾಷ್ಟ್ರ ಪಿತಾಮಹನ 71ನೇ ಪುಣ್ಯಸ್ಮರಣೆ: ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಪಣೆ

ದೆಹಲಿ: ರಾಷ್ಟ್ರಪಿತಾಮಹ ಮಹಾತ್ಮ ಗಾಂಧೀಜಿ ಅವರ 71ನೇ ಪುಣ್ಯಸ್ಮರಣೆಯನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ರಮನಾಥ್​ ಕೋವಿಂದ್ ಹಾಗೂ ಪ್ರಧಾನಿ ಮೋದಿ, ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿದರು. ಪ್ರಧಾನಿ ಮೋದಿ ಅವರು ಗುಜರಾತ್​ನ ದಂಡಿಯಲ್ಲಿಂದು ಉಪ್ಪಿನ ಸತ್ಯಾಗ್ರಹದ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.

ಹುತಾತ್ಮರ ದಿನದ ಕುರಿತು ಟ್ವೀಟ್ ಮಾಡಿದ ರಾಷ್ಟ್ರಪತಿ ರಮನಾಥ್ ಕೋವಿಂದ್​, “ಹುತಾತ್ಮರ ದಿನದಂದು ಮಹಾತ್ಮ ಗಾಂಧಿ ಹಾಗೂ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮ ಯೋಧರ ಸೇವೆಯನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಿದ್ದೇವೆ” ಅಂತ ಬರೆದಿದ್ದಾರೆ.

“ಬಾಪೂ ಅವರ ಪುಣ್ಯತಿಥಿಯಂದು ನಾನು ದಂಡಿಯಲ್ಲಿರಲಿದ್ದೇನೆ. ದಾಂಡಿಯಲ್ಲಿಯೇ ಗಾಂಧೀಜಿ ಅವರು ಬ್ರಿಟಿಷರ ವಸಾಹತುಶಾಹಿತ್ವಕ್ಕೆ ಸವಾಲೆಸೆದಿದ್ದರು. ಅಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹದ ಸ್ಮಾರಕವನ್ನು ಈ ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ. ಇದು ಗಾಂಧೀಜಿ ಅವರ ಮುಂದಾಳುತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸತ್ಯಾಗ್ರಹಿಗಳಿಗಿರುವ ಗೌರವ” ಅಂತ ಟ್ವೀಟ್ ಮಾಡಿದ್ದಾರೆ.

ಅಹಮದಾಬಾದ್​ನಿಂದ ದಂಡಿಗೆ ಸಂಚರಿಸಿದ ಮಹಾತ್ಮ ಗಾಂಧಿಯವರ 40 ಮೀಟರ್ ಎತ್ತರದ ಪ್ರತಿಮೆ ಜೊತೆ ಸತ್ಯಾಗ್ರಹದಲ್ಲಿ ಭಾಗವಹಿಸಿದ 80 ಜನರೂ ಸೇರಿರುವಸ್ಮಾರಕ ನಿರ್ಮಿಸಲಾಗಿದೆ. 1948 ಜನವರಿ 30ರಂದು ಮಹಾತ್ಮಗಾಂಧಿ ಅವರಿಗೆ ನಾಥೂರಾಮ್​ ಗೋಡ್ಸೆ ಗುಂಡು ಹಾರಿಸಿದ್ದರು.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

ADcauth on