Sunday, May 29, 2022
Powertv Logo
Homeuncategorizedಕೊರೊನಾ ಪಾಸಿಟಿವ್ ಎಫೆಕ್ಟ್... ನಾಳೆಯಿಂದ ಮೈಸೂರಿನ ಪ್ರಮುಖ ಮಾರುಕಟ್ಟೆಗಳು ನಾಲ್ಕು ದಿನಗಳ ಕಾಲ ಬಂದ್..

ಕೊರೊನಾ ಪಾಸಿಟಿವ್ ಎಫೆಕ್ಟ್… ನಾಳೆಯಿಂದ ಮೈಸೂರಿನ ಪ್ರಮುಖ ಮಾರುಕಟ್ಟೆಗಳು ನಾಲ್ಕು ದಿನಗಳ ಕಾಲ ಬಂದ್..

ಮೈಸುರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ಕೊರೊನಾ ಮಹಾಮಾರಿ ಭೀತಿ ಹುಟ್ಟಿಸುತ್ತಿದೆ. ದಿನೇ ದಿನೇ  ಕೊರೊನಾ ಪಾಸಿಟಿವ್ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆ ನಾಳೆಯಿಂದ ಪ್ರಮುಖ ಮಾರುಕಟ್ಟೆಗಳು ನಾಲ್ಕು ದಿನಗಳ ಕಾಲ ಬಂದ್ ಆಗಲಿದೆ.

ದೇವರಾಜ ಮಾರುಕಟ್ಟೆ, ಸಂತೇಪೇಟೆ, ಶಿವರಾಂಪೇಟೆ,ಬೋಟಿಬಜಾರ್,ಮನ್ನಾರ್ಸ್ ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆ ಬಂದ್ ಆಗಲಿದೆ. ನಾಲ್ಕು ದಿನಗಳ ಕಾಲ ಬಂದ್ ಮಾಡುವಂತೆ  ಮೈಸೂರು ಮಹಾನಗರ ಪಾಲಿಕೆ ಚಆಯುಕ್ತ ಗುರುದತ್ ಹೆಗಡೆ ಆದೇಶಿಸಿದ್ದಾರೆ. ನಾಲ್ಕು ದಿನಗಳ ಕಾಲ ಸದರಿ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಸ್ಥಬ್ಧವಾಗಲಿದೆ. ಮೈಸೂರಿನ ಹೃದಯಭಾಗವಾದ ಈ ಸ್ಥಳದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿರುವ ಹಿನ್ನಲೆನಾಳೆಯಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments