Saturday, October 1, 2022
Powertv Logo
Homeಕ್ರೀಡೆಮಾ.26ರಿಂದ IPL ಆರಂಭ : ಕ್ರಿಕೆಟ್​ ಫ್ಯಾನ್ಸ್​​ಗೆ ಗುಡ್​ ನ್ಯೂಸ್​

ಮಾ.26ರಿಂದ IPL ಆರಂಭ : ಕ್ರಿಕೆಟ್​ ಫ್ಯಾನ್ಸ್​​ಗೆ ಗುಡ್​ ನ್ಯೂಸ್​

ನವದೆಹಲಿ: ಐಪಿಎಲ್ 15ನೇ ಆವೃತ್ತಿಯನ್ನು ಮಾರ್ಚ್ 26ರಿಂದ ಮೇ 29ರವರೆಗೆ ನಡೆಸಲು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಸಿಸಿಐ ಮಾರ್ಚ್ 27ರಿಂದ ಟೂರ್ನಿ ಆರಂಭಿಸಲು ಯೋಜಿಸಿದ್ದರೂ, ಪ್ರಸಾರ ವಾಹಿನಿಯ ಮನವಿಯ ಮೇರೆಗೆ ಒಂದು ದಿನ ಮುಂಚಿತವಾಗಿಯೇ ಆರಂಭಿಸಲು ತೀರ್ಮಾನಿಸಿದೆ.

ಈ ಹಿಂದೆ ವರದಿಯಾದಂತೆ, ಮುಂಬೈನಲ್ಲಿ 55 ಮತ್ತು ಪುಣೆಯಲ್ಲಿ 15 ಲೀಗ್ ಪಂದ್ಯಗಳು ನಡೆಯಲಿವೆ. ಮುಂಬೈನ ವಾಂಖೆಡೆಯಲ್ಲಿ 20, ಬ್ರಬೋರ್ನ್‌ನಲ್ಲಿ 15 ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿವೆ.

ಈ ಸಲ ಪ್ರೇಕ್ಷಕರಿಗೂ ಪ್ರವೇಶ ಕಲ್ಪಿಸಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದು, ಮಹಾರಾಷ್ಟ್ರ ಸರ್ಕಾರದ ಮಾರ್ಗಸೂಚಿ ಯಂತೆ ಸ್ಟೇಡಿಯಂಗೆ ಶೇ. 25ರಿಂದ 50 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದು ಎಂದಿದ್ದಾರೆ. ಮುಂದಿನ ವರ್ಷದಿಂದ ಮಹಿಳಾ ಐಪಿಎಲ್‌ ಟೂರ್ನಿ ಆಯೋಜನೆಗೂ ಬಿಸಿಸಿಐ ಬಹುತೇಕ ನಿರ್ಧಾರ ಕೈಗೊಂಡಿದೆ.

- Advertisment -

Most Popular

Recent Comments