‘ಪೈಲ್ವಾನ್​’ ಬರ್ತ್​​ಡೇಗೆ ‘ಸುಲ್ತಾನ್​’ ವಿಶ್​..!

0
907

ಅಭಿನಯ ಚಕ್ರವರ್ತಿ, ಸ್ಯಾಂಡಲ್​ವುಡ್​ ಬಾದ್​ ಷಾ ಕಿಚ್ಚ ಸುದೀಪ್ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸುದೀಪ್ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಸ್ಟಾರ್. ಸುದೀಪ್ ಕನ್ನಡದ ಜೊತೆಗೆ ಬೇರೆ ಚಿತ್ರರಂಗದಲ್ಲೂ ಒಳ್ಳೆಯ ಸಂಬಂಧವನ್ನು ಹೊಂದಿದ್ದು, ಅವರಿಗೆ ಬಹು ದೊಡ್ಡ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ.
ಇನ್ನು ಸುದೀಪ್​ ಮತ್ತು ಬಾಲಿವುಡ್ ‘ಸುಲ್ತಾನ’ ಸಲ್ಮಾನ್ ಖಾನ್ ಉತ್ತಮ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತಿರುವಂಥಾ ವಿಷಯವೇ. ಸುದೀಪ್ ಸಲ್ಲು ಜೊತೆ ದಬಾಂಗ್-3ನಲ್ಲಿ ಅಭಿನಯಿಸ್ತಿದ್ದಾರೆ. ಇಂದು ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ವಿಶ್ ಮಾಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಸಹೋದ ಅರ್ಬಾಝ್​ ಖಾನ್ ಹಾಗೂ ಡೈರೆಕ್ಟರ್ ಪ್ರಭುದೇವ ವಿಡಿಯೋ ಮೂಲಕ ವಿಶೇಷವಾಗಿ ಸುದೀಪ್​ಗೆ ಶುಭ ಹಾರೈಸಿದ್ದಾರೆ. ಜೊತೆಗೆ ಪೈಲ್ವಾನ್ ಸಿನಿಮಾಕ್ಕೆ ಯಶಸ್ಸು ಸಿಗಲಿ ಅಂತಲೂ ವಿಶ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here