ಇನ್ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅಲ್ಲ..!

0
519

ಯಂಗ್ ಕ್ರೇಜಿಸ್ಟಾರ್ ಮನೋರಂಜನ್ ರವಿಚಂದ್ರನ್ ತಮ್ಮ ಹೆಸ್ರನ್ನು ಬದಲಿಸಿಕೊಂಡಿದ್ದಾರೆ. ಇನ್ಮುಂದೆ ಮನೋರಂಜನ್ ಅಲ್ಲ.. ಮನು ರಂಜನ್!
ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾವಣೆ ಬೇಕೆಂದು ಮನೋರಂಜನ್ ಬದಲಿಗೆ ಮನು ರಂಜನ್ ಎಂದು ಮರುನಾಮಕಾರಣ ಮಾಡಿಕೊಂಡಿದ್ದಾರೆ.
‘ಸಾಹೇಬ’ ಚಿತ್ರದ ಮೂಲಕ 2017ರಲ್ಲಿ ಸ್ಯಾಂಡಲ್ವುಡ್​ಗೆ ಎಂಟ್ರಿ ಕೊಟ್ಟ ಮನು ರಂಜನ್ ರವಿಚಂದ್ರನ್, 2018ರಲ್ಲಿ ‘ಬೃಹಸ್ಪತಿ’ಯಾಗಿ ಕಾಣಿಸಿಕೊಂಡ್ರು. ಸದ್ಯ ಅವರ ಅಭಿನಯದ ಮೂರನೇ ಸಿನಿಮಾ ‘ಮುಗಿಲ್ ಪೇಟೆ’ ಲಾಂಚ್ ಆಗಿದ್ದು, ಈ ಸಿನಿಮಾ ಟೈಟಲ್ ಕಾರ್ಡಲ್ಲಿ ಮನು ರಂಜನ್ ಎಂದಿರಲಿದೆ. ಇನ್ನು ಈ ಸಿನಿಮಾಕ್ಕೆ ಭರತ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಶ್ರೀಧರ್ ಸಂಭ್ರಮ್ ಸಂಗೀತವಿದೆ. ಖಯಾದು ಮೋಹನ್ ಲೋರಾ ಮನು ರಂಜನ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here