ಸಾವವನ್ನೇ ಗೆದ್ದು ಬಂದ ಕನ್ನಡದ ವೀರ ಯೋಧ ಮನೋಹರ್..!

0
191

ಇದು ಪುಲ್ವಾಮಾ ದಾಳಿಯಲ್ಲಿ ಸಾವನ್ನೇ ಗೆದ್ದು ಬಂದ ವೀರ ಕನ್ನಡಿಗನ ಸ್ಟೋರಿ. ಕನ್ನಡದ ಹೆಮ್ಮೆಯ ಯೋಧರೊಬ್ಬರ ಕಥೆ.
ಹೌದು, ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನಗಳನ್ನ ಗುರಿಯಾಗಿಸಿಕೊಂಡು ಜೈಷ್ -ಎ-ಮಹ್ಮದ್ ಸಂಘಟನೆ ಬಾಂಬ್ ನಡೆಸಿದ ದಾಳಿಯಲ್ಲಿ 4೦ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆದ ಹಿಂದಿನ ಬಸ್​ನಲ್ಲೇ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಸೇವಲಾಲ್ ತಾಂಡದ ಯೋಧ ಮನೋಹರ್ ರಾಠೋಡ್ ಅವರು ಇದ್ದರು. ಸ್ಪೋಟದ ತೀವ್ರತೆಗೆ ಅವರಿದ್ದ ಬಸ್​​ಗೂ ಕೂಡ ಹಾನಿಯಾಗಿದ್ದು, ಅವರ ವಾಹನದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಆದರೆ, ಈ ಘಟನೆಯಲ್ಲಿ ಮೂರ್ಚೆ ಹೋಗಿದ್ದರು. ಅವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಮನೋಹರ್ ಅವರು ಚೇತರಿಸಿಕೊಂಡು ಮೆಡಿಕಲ್ ಲೀವ್ ಮೇಲೆ ತವರೂರಿಗೆ ಮರಳಿದ್ದು, ಸಾವನ್ನೇ ಗೆದ್ದುಬಂದಿದ್ದಾರೆ. ಪುಲ್ವಾಮಾ ದಾಳಿಯ ನಂತರ ಮಾಧ್ಯಮದಲ್ಲಿ ಬರುವ ಸುದ್ದಿ ನೋಡಿ ಸಹಜವಾಗಿ ಎಲ್ಲರೂ ಗಾಬರಿಯಾಗಿದ್ದರು. ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಡಿ ದೇಶವೇ ಕಣ್ಣೀರು ಹಾಕಿತ್ತು. ಅದರಲ್ಲಿ ನಮ್ಮ ಬೀದರ್ ಜಿಲ್ಲೆಯೋಧ ಸಾವನ್ನೇ ಗೆದ್ದು ಬಂದಿದ್ದು ನಮಗೆ ತುಂಬಾ ಖುಷಿ ತಂದಿದೆ. ನಾವು ಯೋಧರಿಗೆ ಯಾವುದೇ ಸಮಯದಲ್ಲಿ ಬೆನ್ನೆಲುಬಾಗಿ ನಾವಿದ್ದೇವೆ ಎಂದು ಮನೋಹರ್ ಅವರ ಊರಿನವರು ಹೇಳುತ್ತಾರೆ.
ತವರು ಗ್ರಾಮ ಸೇವಾಲಾಲ್ ತಾಂಡಾದಲ್ಲಿ ಅವರಿಗೆ ಅದ್ಧೂರಿ ಮೆರವಣಿಗೆ ನಡೆಸಿದ್ದಾರೆ. ‘ನಾನು ಸಂಪೂರ್ಣ ಗುಣಮುಖನಾಗಿ ಶೀಘ್ರದಲ್ಲಿ ಸೇನೆಗೆ ಸೇವೆ ಸಲ್ಲಿಸಲು ತೆರಳುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
-ರಾಜ್​​ಕುಮಾರ್, ಬೀದರ್

LEAVE A REPLY

Please enter your comment!
Please enter your name here