Saturday, October 1, 2022
Powertv Logo
Homeದೇಶಮನೋಹರ್ ಪರಿಕ್ಕರ್ ಸ್ಥಿತಿ ಗಂಭೀರ

ಮನೋಹರ್ ಪರಿಕ್ಕರ್ ಸ್ಥಿತಿ ಗಂಭೀರ

ನವದೆಹಲಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದೇವರ ದಯೆಯಿಂದ ಉಸಿರಾಡ್ತಿದ್ದಾರೆ. ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಅಂತ ಗೋವಾ ವಿಧಾನಸಭಾ ಉಪಸಭಾಪತಿ ಮೈಕಲ್​ ಲೋಬೋ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಪರಿಕ್ಕರ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಚಿವೆಯರಾದ ಸುಷ್ಮಾ ಸ್ವರಾಜ್​ ಮತ್ತು ನಿರ್ಮಲಾ ಸೀತಾರಾಮನ್​ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಅಂತ ತಿಳಿದುಬಂದಿದೆ.
ಪ್ಯಾನ್​ಕ್ರಿಯಾಸ್​ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು 2018ರ ಸೆಪ್ಟೆಂಬರ್​ ನಲ್ಲಿ ಭಾರತಕ್ಕೆ ವಾಪಸ್ಸಾಗಿದ್ರು.

ಇತ್ತೀಚೆಗೆ ಮೂಗಿಗೆ ಪೈಪ್​ ಹಾಕಿಕೊಂಡೇ ಬಜೆಟ್​ ಕೂಡ ಮಂಡಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಕಳೆದ ಡಿಸೆಂಬರ್​ನಿಂದ ಸಾರ್ವಜನಿಕ ಜೀವನದಲ್ಲಿ ಬ್ಯುಸಿ ಇದ್ದಾರೆ. ಇದೀಗ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments