Saturday, May 21, 2022
Powertv Logo
Homeರಾಜ್ಯತಡವಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಮಾವು

ತಡವಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಮಾವು

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಕಾರಣ ಮಾವು ಉತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬಂದಿತ್ತು. ಬೆಲೆ ಕಡಿಮೆ ಇದ್ರೂ ಸಹ ಜನ ಕೊಂಡುಕೊಳ್ಳಲಾಗದ ಪರಿಸ್ಥಿತಿ ಇತ್ತು. ಈ ಬಾರಿಯಾದ್ರೂ ಮಾವು ಸಿಗಬಹುದು ಅನ್ನೋ ತವಕದಲ್ಲಿದ್ದ ಜನರಿಗೆ ಸೀಸನ್ ಬಂದ್ರೂ ಇನ್ನೂ ಸ್ವಲ್ಪ ದಿನ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಯಾಕೆಂದ್ರೆ ಕಳೆದ ವರ್ಷ ನವೆಂಬರ್ ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಗೆ ಮಣ್ಣಿನ ತೇವಾಂಶ ಹೆಚ್ಚಾಗಿ ಹೂ ಬಿಡುವಾಗ ತಡವಾಗಿದೆ. ಇದ್ರಿಂದ ಮಾವು ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಬೇಕಾಗಿತ್ತು.

ಬೇಸಿಗೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗ್ತಿದ್ದು, ಒಣಗಿದ್ದ ಮಣ್ಣು ಮತ್ತೆ ಹಸಿಯಾಗಿದೆ. ಅಲ್ದೆ, ಗಾಳಿ ಮಳೆಗೆ ಮಾವಿನ ಹೂಗಳು ಉದುರಲಾರಂಭಿಸಿದೆ. ಇನ್ನೂ ಸ್ವಲ್ಪ ದಿನ ಮಳೆಯಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಏಪ್ರಿಲ್ ತಿಂಗಳು ಮುಗೀತಾ ಬರ್ತಿದ್ರೂ ಎಲ್ಲಾ ವಿಧದ ಮಾವಿನ ಮಾರ್ಕೆಟ್ ಗೆ ಇನ್ನೂ ತಲುಪಿಲ್ಲ. ಈ ವರೆಗೆ ಬಂದ ಸಿಂಧೂರ, ರಸ್ಬೆರಿ, ಬಾದಾಮಿ, ಅಲ್ಫಾನ್ಸೊ ಮಾವಿಗೆ ಸಿಕ್ಕಾಪಟ್ಟೆ ಬೆಲೆ ಹೆಚ್ಚಾಗಿದ್ದು ಸದ್ಯ ಒಂದು ಕೆಜಿ ಮಾವಿನ ಬೆಲೆ 50 ರಿಂದ 60ರೂ ಇದ್ದದ್ದು ಈಗ 200ರೂ. ಆಗಿ ದುಪ್ಪಟ್ಟಾಗಿದೆ. ಹಾಗಾಗಿ ಇನ್ನು ಮೇ ಮಧ್ಯದಲ್ಲಿ ಹಾಗೂ ಜೂನ್ ಆರಂಭದವರೆಗೆ ಗ್ರಾಹಕರು ಕಾಯಬೇಕಾಗಿದೆ.

ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ಸರಿಯಾಗಿ ಮಾವಿನ ಹಣ್ಣುಗಳು ಸಿಗ್ತಿಲ್ಲ. ಆದ್ರಿಂದ ಸ್ವಾಭಾವಿಕವಾಗಿ ಹಣ್ಣಿನ ಬೆಲೆ ಜಾಸ್ತಿಯಾಗಿದೆ. ಇನ್ನು ಬೆಲೆ ನೋಡಿ ಗ್ರಾಹಕರು ಹಣ್ಣುಗಳನ್ನ ಖರೀದಿಸಲು ಹಿಂದೆ ಮುಂದೆ ನೋಡ್ತಿದ್ದಾರೆ. ಹಾಗಾಗಿ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ ಅಂತಾರೆ ಹಣ್ಣಿನ ವ್ಯಾಪಾರಿಗಳು.
ಈ ತಿಂಗಳ ಆರಂಭದಲ್ಲಾಗಲೇ ಮಾರುಕಟ್ಟೆಗಳು ಮಾವಿನ ಹಣ್ಣುಗಳಿಂದ ತುಂಬಿರಬೇಕಾಗಿತ್ತು. ಅದ್ರಲ್ಲೂ ಸದ್ಯಕ್ಕೆ ಸಿಗುವ ಹಣ್ಣಿನ ಬೆಲೆ ತುಂಬಾ ಹೆಚ್ಚಾಗಿದೆ. ಹಾಗಾಗಿ ಮಧ್ಯಮ ವರ್ಗದ ಜನರಿಗೆ ಮಾವು ಕೊಂಡುಕೊಳ್ಳಲಾಗ್ತಿಲ್ಲ ಅಂತಾರೆ ಮಾವು ಪ್ರಿಯರು.

ಹವಾಮಾನ ವೈಪರೀತ್ಯವು ಮಾವು ಬೆಳೆಗಾರರನ್ನ ಕಂಗೆಸಿದ್ರೆ, ಬೆಲೆ ಏರಿಕೆ ಗ್ರಾಹಕರನ್ನ ಸುಡುತ್ತಿದೆ.ಈ ಮಧ್ಯೆ ವ್ಯಾಪಾರಿಗಳು ಹಣ್ಣಿಗೆ ಬೇಡಿಕೆ ಇಲ್ದೇ ನಷ್ಟ ಅನುಭವಿಸ್ತಿದ್ದಾರೆ. ಆದ್ರೂ, ಮುಂದಿನ ತಿಂಗಳಲ್ಲಾದ್ರೂ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

- Advertisment -

Most Popular

Recent Comments