Saturday, October 1, 2022
Powertv Logo
Homeಈ ಕ್ಷಣಕರಾವಳಿ ಸ್ಪೆಷಲ್​ ಮರುವಾಯಿ ಸುಕ್ಕ

ಕರಾವಳಿ ಸ್ಪೆಷಲ್​ ಮರುವಾಯಿ ಸುಕ್ಕ

ಮಂಗಳೂರಿನಲ್ಲಿ ಮರುವಾಯಿ ಸುಕ್ಕ ಎಂದರೆ ಸಾಕು ಬಾಯಲ್ಲಿ ನೀರು ಬರುವುದಂತು ಸಹಜ .ಇದರಲ್ಲಿ ಮರುವಾಯಿ ಪುಂಡಿ.ಮರುವಾಯಿ ಸಾರು, ಮರುವಾಯಿ ಬಸಲೆ ಹೀಗೆ ಮರುವಾಯಿಂದ ನಾವು ಹಲವಾರು ಖಾದ್ಯಗಳನ್ನು ಮಾಡಬಹುದು.
ಮರುವಾಯಿ ಸುಕ್ಕ ಮಾಡಲ ಬೇಕಾಗುವ ಸಾಮಾಗ್ರಿಗಳು

ಮರುವಾಯಿ ಒಂದು ಕೆಜಿ
ತುರಿದ ತೆಂಗಿನಕಾಯಿ
ಅರಶಿಣ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಮೆಂತೆ
ಕೊತ್ತಂಬರಿ ಬೀಜ
ಕರಿಮೆಣಸು
ಬ್ಯಾಡಗಿ ಮೆಣಸು
ಹುಣಸೆ ಹುಳಿ
ಬೇವಿನ ಸೊಪ್ಪು
ತೆಂಗಿನ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಬ್ಯಾಡಗಿ ಮೆಣಸು,ಮೆಂತೆ,ಕೊತ್ತಂಬರಿಬೀಜ,ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚೆನ್ನಾಗಿ ಕಾಯಿಸಬೇಕು . ಚೆನ್ನಾಗಿ ಕಾಯಿದ ನಂತರ ಆರಲು ಇಡಬೇಕು.
ಮಿಕ್ಸ್ ಜಾರ್​ ತೆಗೆದುಕೊಂಡು ಬಾಣಲೆಯ ಮಸಾಲೆಯನ್ನು ಮಿಕ್ಸ್ ಜಾರ್​ನಲ್ಲಿ ಪುಡಿ ಮಾಡಿ ನಂತರ ಹುಣಸೆ ಹುಳಿ ಹಾಕಿ ಚೆನ್ನಾಗಿ ಇನ್ನೊಮ್ಮೆ ಮಿಕ್ಸ್ ಮಾಡಬೇಕು.
ಒಂದು ಬಾಣಲೆಗೆ ತೆಂಗಿನ ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದ ನಂತರ ಸಾಸಿವೆಯನ್ನು ಹಾಕಬೇಕು.ಸಾಸಿವೆ ಬಾಣಲೆಯಲ್ಲಿ ಹುಡಿಯಾಗುವಾಗ ಬೇವಿನ ಸೊಪ್ಪ , ಹೆಚ್ಚಿದ ನೀರುಳ್ಳಿಯನ್ನು ಹಾಕಬೇಕು.ನೀರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಸ್ವಲ್ಪ ಉಪ್ಪನ್ನು ಹಾಕಿ ಅರಶಿನ ಹುಡಿಯನ್ನು ಹಾಕಿ ನಂತರ ಮರುವಾಯಿಯನ್ನು ಹದವಾಗಿ ಬೇಯಿಸಿ ಐದು ನಿಮಿಷಗಳ ಬಳಿಕ ಮರುವಾಯಿ ಬೆಂದಿದೆಯಾ ಎಂದು ಮುಚ್ಚಳವನ್ನು ತೆಗೆದು ನೋಡಬೇಕು.
ನಂತರ ಇದಕ್ಕೆ ಆಗ ತಯಾರಿಸಿದಂತಹ ಮಸಾಲೆ ವಿಶ್ರಣವನ್ನು ಇದಕ್ಕೆ ಸೇರಿಸಿ ಇನ್ನೊಮ್ಮೆ ಸೌಟ್​ನಿಂದ ಮಿಕ್ಸ್ ಮಾಡಿ ಒಂದು ನಿಮಿಷ ಹಬೆಯಲ್ಲಿ ಇರಲಿ ಈಗ ನಾವು ರುಚಿ ರುಚಿಯಾದ ಮರುವಾಯಿ ಸುಕ್ಕವನ್ನು ಊಟದ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

 

- Advertisment -

Most Popular

Recent Comments