Home ರಾಜ್ಯ ಕೊನೆಗೂ ಸರಗಳ್ಳ ಅಂದರ್ 

ಕೊನೆಗೂ ಸರಗಳ್ಳ ಅಂದರ್ 

ಮಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದು ಮಹಿಳೆಯ ಸರ ಎಳೆದೊಯ್ದಿದ್ದ ಆರೋಪಿಯನ್ನ ಮುಲ್ಕಿ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನ ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಸಿದ್ದಿಕುಲ್ ಅಕ್ಬರ್ (30) ಎಂದು ಗುರುತಿಸಲಾಗಿದೆ. ಕಳೆದ ಜುಲೈ 22 ರಂದು ಮಧ್ಯಾಹ್ನ  ಗ್ರಾಹಕನ ಸೋಗಿನಲ್ಲಿ ಬಂದಿದ್ದ ಈತ, ಚರಂತಿಪೇಟೆಯಲ್ಲಿರುವ ಸೀತಾ ಎಂಬವರ ಅಂಗಡಿಗೆ ಬಂದು ಬಿಸ್ಕೆಟ್ ಕೇಳಿದ್ದು, ಇನ್ನೇನು ಬಿಸ್ಕೆಟ್ ಕೊಡಲು ಮುಂದಾಗುತ್ತಿದ್ದಂತೆ ಸೀತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೇ ಎಗರಿಸಿ ಪರಾರಿಯಾಗಿದ್ದ.

ಕಳ್ಳತನ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲೂ ದಾಖಲಾಗಿತ್ತು. ಇದೀಗ ಸಿಸಿಟಿವಿ ಫೂಟೇಜ್ ಆಧರಿಸಿ ಕಾರ್ಯಾಚರಣೆ ನಡೆಸಿದ ಮುಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 2 ಪವನ್ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ನ್ನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ನಿರ್ದೇಶನದಲ್ಲಿ ಉಪ ಆಯುಕ್ತ ಅರುಣಾಂಶು ಗಿರಿ ಮತ್ತು ವಿನಯ್ ಗಾಂವ್ಕರ್, ಸಹಾಯಕ ಪೊಲೀಸ್ ಆಯುಕ್ತ ಕೆ.ಯು.ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಮೂಲ್ಕಿ ಸಿಪಿಐ ಜಯರಾಮ ಡಿ.ಗೌಡ ನೇತೃತ್ವದಲ್ಲಿ ಎಸ್ಐಗಳಾದ ಶೀತಲ್ ಅಲಗೂರು, ದೇಜಪ್ಪ, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಧರ್ಮೇಂದ್ರ, ಶಶಿಧರ್, ಸುರೇಶ್, ಸುಧೀರ್, ಚಂದ್ರಶೇಖರ್, ರಾಜೇಶ್, ಶಾರದಾ, ಅಕ್ಷಯಾ, ಕಂಪ್ಯೂಟರ್ ವಿಭಾಗದ ಮನೋಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಇರ್ಷಾದ್ ಕಿನ್ನಿಗೋಳಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments