Home ರಾಜ್ಯ ಎರಡುವರೆ ತಿಂಗಳ ಬಳಿಕ ತಲಪಾಡಿ ಗಡಿ ಓಪನ್​​​​​​​​​​​​ !

ಎರಡುವರೆ ತಿಂಗಳ ಬಳಿಕ ತಲಪಾಡಿ ಗಡಿ ಓಪನ್​​​​​​​​​​​​ !

ಮಂಗಳೂರು: ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ನೆರೆಯ ಕಾಸರಗೋಡು ಮತ್ತು ದ.ಕ. ಜಿಲ್ಲೆಯ ನಡುವೆ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕಾಗಿ ನಿತ್ಯ ಪಾಸ್‌ ವಿತರಣೆಗೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ  ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ.

ಎರಡೂವರೆ ತಿಂಗಳಿನಿಂದ ಬಂದ್‌ ಆಗಿದ್ದ ತಲಪಾಡಿ ಗಡಿಯು ಕೆಲವು ಷರತ್ತುಗಳೊಂದಿಗೆ ಸೀಮಿತ ಪ್ರಯಾಣಿಕರಿಗೆ ತೆರೆದುಕೊಳ್ಳಲು ಅಣಿಯಾಗಿದೆ.

ಕಾಸರಗೋಡು ಪ್ರವೇಶಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ಅವರು ಮಂಗಳವಾರ ಆದೇಶ ಹೊರಡಿಸಿದ ಬೆನ್ನಿಗೆ, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಬುಧವಾರ ಆದೇಶ ಹೊರಡಿಸಿ ದ.ಕ. ಪ್ರವೇಶಕ್ಕೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸಲು ಹಾಗೂ ಮಂಗಳೂರಿನಿಂದ ಕಾಸರಗೋಡಿಗೆ ತೆರಳಲು ಆಯಾ ಜಿಲ್ಲಾಡಳಿತದ ಪಾಸ್‌ ಹೊಂದಬೇಕಾಗಿರುವುದು ಕಡ್ಡಾಯ. ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರಕಾರಿ ನೌಕರರಿಗಷ್ಟೇ ಈಗ ಆಗಮನ – ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಗಡಿಯಲ್ಲಿ ನಿತ್ಯ ಥರ್ಮಲ್‌ ಸ್ಕ್ಯಾನ್‌ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ.

ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು ಪಾಸ್‌ ಮಾಡಿಸಬೇಕಾದರೆ, ಆಧಾರ್‌ ಕಾರ್ಡ್‌, ಕೆಲಸ ಮಾಡುವ ಅಥವಾ ಶಾಲೆಗೆ ತೆರಳಬೇಕಾದ ಜಾಗವನ್ನು ನಮೂದಿಸಿ, ಐಡಿ ಕಾರ್ಡ್‌ ದಾಖಲೆ ಸಲ್ಲಿಸಿ ಪರವಾನಿಗೆ ಪಡೆಯಬೇಕು. ಅರ್ಜಿಯನ್ನು https://bit.ly/dkdpermit ಮೂಲಕ ಸಲ್ಲಿಸಬಹುದು. ಸಹಾಯಕ ಕಮಿಷನರ್‌ ಅವರು ನಿತ್ಯ ಸಂಚಾರದ ಪಾಸ್‌ ನೀಡುತ್ತಾರೆ. ಆದರೆ ಚೆಕ್‌ ಪೋಸ್ಟ್‌ನಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗೊಳ್ಳಬೇಕು. ಈ ಪಾಸ್‌ಗಳ ಅವಧಿ ಜೂ.30ರ ವರೆಗೆ ಮಾತ್ರ ಇದ್ದು ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್‌ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ   ಸಿಂಧು ಬಿ ರೂಪೇಶ್​ ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯವರು ದ.ಕ ಜಿಲ್ಲೆಗೆ ಬರುವುದು ಹೇಗೆ ?
ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ಪ್ರವೇಶಿಸಲು ಬಯಸುವವರು ಕಾಸರಗೋಡಿನ “ಕೋವಿಡ್‌ 19 ಜಾಗೃತಾ ಪೋರ್ಟಲ್‌’ನಲ್ಲಿ ಎಮರ್ಜೆನ್ಸಿ ಪಾಸ್‌ಗಾಗಿ ನೋಂದಣಿ ಮಾಡಬೇಕು. ಅಲ್ಲಿ “ಇಂಟರ್‌ಸ್ಟೇಟ್‌ ಟ್ರಾವೆಲ್‌ ಆನ್‌ ಡೈಲಿ ಬೇಸಿಸ್‌’ ಎಂಬ ಕಾರಣ ನೀಡಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ತಿಳಿಸಿದ್ದಾರೆ.

ತಲಪಾಡಿ ಮೂಲಕ ಮಾತ್ರ ಅವಕಾಶ

ತಲಪಾಡಿ ಚೆಕ್‌ಪೋಸ್ಟ್‌ ಮೂಲಕವೇ ದ.ಕ. ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಸರಗೋಡು ಜಿಲ್ಲೆಯ ಉಳಿ ದೆಲ್ಲ ಗಡಿಗ‌ಳನ್ನು ಬಂದ್‌ ಮಾಡಲಾಗುತ್ತದೆ ಎಂದು ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ...

ನಕಲಿ ತಹಸೀಲ್ದಾರ್ ಮತ್ತು ಬ್ರೋಕರ್ ಎಸಿಬಿ ಬಲೆಗೆ..!

ತುಮಕೂರು : ತಹಶೀಲ್ದಾರ್ ಮೋಹನ್ ಅವರ ಹೆಸರಿನಲ್ಲಿ ರೈತರೊಬ್ಬರಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಬ್ರೋಕರ್ ಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ರುದ್ರಸ್ವಾಮಿ ಮತ್ತು ಹರಳೂರು ಗ್ರಾಮದ ಶಿವಕುಮಾರ್...

ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್ ಇನ್ನಿಲ್ಲ..!

ಬೆಂಗಳೂರು : ಕನ್ನಡದ ಹಾಸ್ಯ ಕಲಾವಿದರಾಗಿದ್ದ ರಾಜ ಗೋಪಾಲ್ ನಿನ್ನೆ ರಾತ್ರಿ 1 ಗಂಟೆಗೆ ಮನೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅಸ್ತಮ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 69 ವರ್ಷ ವಯಸ್ಸಾಗಿತ್ತು. ರಾಜ್ ಗೊಪಾಲ್ ಕೆಂಗೇರಿ...

ರಾಬರಿ ಆರೋಪಿಯಿಂದ ‘ಖಾಕಿ’ಗೆ ಕಂಟಕ..!

ದೇವನಹಳ್ಳಿ : ರಾಜ್ಯದಲ್ಲಿ ಕೊರೊನಾ ವೈರಸ್ ಪೋಲಿಸ್ ಸಿಬ್ಬಂದಿಗಳಿಗೆ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬೇರೆ ಬೇರೆ ಮಾರ್ಗಗಳಿಂದ ಕೊರೊನಾ ವೈರಸ್ ಹರಡುತ್ತಿದೆ....