ಮಂಗಳೂರು : ಕೊರೋನಾ ಮಹಾಮಾರಿ ಮಂಗಳೂರಿನಲ್ಲಿ ಮತ್ತಿಬ್ಬರನ್ನ ಬಲಿ ಪಡೆದಿದೆ. 51ರ ಹರೆಯದ ಮಂಗಳೂರು ಹೊರವಲಯದ ಬೆಂಗ್ರೆ ನಿವಾಸಿ ಹಾಗೂ 31 ರ ಹರೆಯದ ಭಟ್ಕಳ ಮೂಲದ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗ್ರೆ ನಿವಾಸಿ ನಿನ್ನೆ ರಾತ್ರಿ 8 ಗಂಟೆಗೆ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಮಧುಮೇಹ ಮತ್ತು ನ್ಯುಮೋನಿಯಾ ದಿಂದ ಬಳಲುತ್ತಿದ್ದರು. ಬಳಿಕ ಟೆಸ್ಟ್ ಮಾಡಿದಾಗ ಇವರಿಗೆ ಸೋಂಕು ದೃಢಗೊಂಡಿದೆ.
ಇನ್ನು ಖಾಸಗಿ ಆಸ್ಪತ್ರೆಗೆ ದಾಖಲಾದ ಐದೇ ನಿಮಿಷದಲ್ಲಿ ಭಟ್ಕಳ ಮೂಲದ 31 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಇವರು ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ತೀವ್ರ ಅಸ್ವಸ್ಥರಾಗಿದ್ದ ಇವರು ಆಸ್ಪತ್ರೆಗೆ ದಾಖಲಾದ ಕೇವಲ 5 ನಿಮಿಷದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇವರು ಅಧಿಕ ರಕ್ತದೊತ್ತಡ ದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.