ಕೊಲಂಬೋ ಸ್ಫೋಟದಲ್ಲಿ ಮಂಗಳೂರು ದಂಪತಿ ಜಸ್ಟ್​ ಎಸ್ಕೇಪ್​..!

0
388

ಮಂಗಳೂರು: ಕೊಲಂಬೋ ದುರಂತದಲ್ಲಿ ಮಂಗಳೂರಿನ ದಂಪತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿವಾಹ ವಾರ್ಷಿಕೋತ್ಸವಕ್ಕೆ ಕೊಲೋಂಬೊಗೆ ತೆರಳಿದ್ದ ಡಾ.ಕೇಶವರಾಜ್, ಪತ್ನಿ ಶ್ರೀದೇವಿ ದಂಪತಿ ‘ದಿ ಸಿನೆಮೆನ್ ಗ್ರ್ಯಾಂಡ್ ಹೋಟೆಲ್​’ನಲ್ಲಿ ಉಳಿಯಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ಏಜೆನ್ಸಿಯಿಂದ ಹೊಟೇಲ್ ಬದಲಾಯಿಸಿದ್ದರು. ಹಾಗಾಗಿ ದಂಪತಿಗಳಿಬ್ಬರೂ ಕೊಲಂಬೋ ಸರಣಿ ಸ್ಫೋಟದಿಂದ ಪಾರಾಗಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಲಂಕಾಗೆ ತೆರಳಿದ್ದ ದಂಪತಿ ಪೂರ್ವ ನಿಯೋಜನೆಯಂತೆ ‘ದಿ ಸಿನೆಮೆನ್ ಗ್ರ್ಯಾಂಡ್ ಹೋಟೆಲ್​’ನಲ್ಲಿ ಉಳಿಯಬೇಕಾಗಿತ್ತು. ಹೋಟೆಲ್​ ಕ್ಯಾನ್ಸ್​ಲ್​ ಆದ ಕಾರಣ ದಂಪತಿ ಬದುಕುಳಿದಿದ್ದಾರೆ. ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ‘ದಿ ಸಿನೆಮೆನ್ ಗ್ರ್ಯಾಂಡ್ ಹೋಟೆಲ್​’ ಮೇಲೂ ಬಾಂಬ್​ ದಾಳಿಯಾಗಿತ್ತು.

LEAVE A REPLY

Please enter your comment!
Please enter your name here