Home ರಾಜ್ಯ ಮಂಗಳೂರಿನಲ್ಲಿ ಸಂಚಾರ ಆರಂಭಿಸಿದ ಸಿಟಿ ಬಸ್​ಗಳು

ಮಂಗಳೂರಿನಲ್ಲಿ ಸಂಚಾರ ಆರಂಭಿಸಿದ ಸಿಟಿ ಬಸ್​ಗಳು

ಮಂಗಳೂರು: ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಪೂರ್ಣವಾಗಿ ಸ್ಥಗಿತಗೊಂಡಿದ್ದ ಸಿಟಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಇಂದಿನಿಂದ ಆರಂಭಗೊಂಡಿದೆ. ಮಂಗಳೂರಿನಲ್ಲಿ 120ಕ್ಕೂ ಅಧಿಕ ಸಿಟಿ ಬಸ್‌ಗಳು ಇಂದು  ರಸ್ತೆಗೆ ಇಳಿದಿವೆ. ಇದರ ಜತೆಯಲ್ಲಿ ಶೇ 30 ರಷ್ಟು ಸಿಟಿ ಬಸ್​​ಗಳು ಸಂಚಾರ ಆರಂಭಿಸಿದೆ
ಈ ಬಗ್ಗೆ ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಲ್ಲ ಬಸ್‌ಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ.  ಸ್ಟೇಟ್‌ಬ್ಯಾಂಕ್‌ನಿಂದ ಹೊರಡುವ ಬಸ್‌ಗಳಿಗೂ ಬೆಳಗ್ಗೆ 7ರಿಂದ 8ರೊಳಗಡೆ ಸ್ಯಾನಿಟೈಸರ್‌ ಸಿಂಪಡನೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ಮಂಗಳೂರಿನ ಫಳ್ನೀರ್‌ನ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

ಇದರ ಜತೆಗೆ ಚಾಲಕನಿಗೆ ಮಾಸ್ಕ್‌ ನೀಡಲಾಗುತ್ತದೆ. ಟಿಕೆಟ್‌ ಕಲೆಕ್ಟರ್‌ಗೆ ಮಾಸ್ಕ್‌ ಹಾಗೂ ಕೈಗವಸು ನೀಡುತ್ತೇವೆ.  ಪ್ರಯಾಣಿಕರಿಗೆ  ಸ್ನೀಯಾನಿಟೈಸರ್​​​​ ನೀಡಲಾಗುತ್ತದೆ. ಪ್ರಯಾಣಿಕರು ಕೂಡ ಮಾಸ್ಕ್‌ ಹಾಕಿಕೊಂಡು ಪ್ರಯಾಣಿಸಬೇಕು. ಬಸ್‌ಗಳಲ್ಲಿಅದಷ್ಟೂ ಹೆಚ್ಚು ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಿಟಿ ಬಸ್‌ ದರದಲ್ಲಿಏರಿಕೆ!
ಸಿಟಿ ಬಸ್‌ ದರದಲ್ಲಿ ಶೇ.15ರಷ್ಟು ಏರಿಕೆ ಕಂಡಿದೆ. 1-2 ಕಿಮೀ ಹಿಂದೆ 8 ರೂ ಇತ್ತು ಇನ್ನುಮುಂದೆ 10 ರೂ ಆಗಲಿದೆ, 2-4 ಕಿಮೀ 9ರೂ ನಿಂದ 10 ರೂ, 4ರಿಂದ 6 ಕಿಮೀಗೆ 10ರಿಂದ 11 ರೂ, 6ರಿಂದ 8 ಕಿಮೀಗೆ 11ರಿಂದ 13 ರೂ, 8ರಿಂದ 10 ಕಿಮೀ ದೂರಕ್ಕೆ 12ರಿಂದ 14 ರೂ, 10ರಿಂದ 12 ಕಿಮೀ ದೂರಕ್ಕೆ 13 ರೂ.ನಿಂದ 15 ರೂ. ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments