106ರ ಅಜ್ಜಿ ನುಡಿದ ಮಂಡ್ಯ ಭವಿಷ್ಯವೇನು?

0
416

ಮಂಡ್ಯ : ಇಡೀ ದೇಶದ ಗಮನ ಸೆಳೆದಿರುವ ಲೋಕಸಭಾ ಕ್ಷೇತ್ರ ಮಂಡ್ಯ. ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಕಣದಲ್ಲಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿದ್ದಾರೆ.
ಈ ಕ್ಷೇತ್ರದಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ, ಕುತೂಹಲ ಗರಿಗೆದರಿದೆ. ಈಗ 106 ವರ್ಷದ ಅಜ್ಜಿಯೊಬ್ಬರು ಮಂಡ್ಯ ರಣಕಣದಲ್ಲಿ ಗೆಲುವು ಯಾರಿಗೆ ಅಂತ ಭವಿಷ್ಯ ನುಡಿದಿದ್ದಾರೆ.
ನಿಖಿಲ್​ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ ಎನ್ನೋದು ಅಜ್ಜಿ ಭವಿಷ್ಯ.’ಕುಮಾರಸ್ವಾಮಿ ಅವರ ಮಗ ಗೆಲ್ತಾನೆ ನೋಡಿ. ನನ್ನ ಮತ ಅವನಿಗೇ. ನಾನು ಅವನಿಗೇ ವೋಟ್ ಹಾಕೋದು. ನನ್ನ ಮೊಮ್ಮಗ ನನ್ನನ್ನುವೋಟ್​ ಹಾಕಲು ಕರೆದುಕೊಂಡು ಹೋಗುತ್ತಾನೆ’ಎಂದು ಅಜ್ಜಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಮಂಡ್ಯದಲ್ಲಿ ನಿಖಿಲ್​​ಗೇ ಗೆಲುವು -106 ವರ್ಷದ ಅಜ್ಜಿ ಭವಿಷ್ಯ

Posted by Powertvnews on Friday, April 5, 2019

LEAVE A REPLY

Please enter your comment!
Please enter your name here