ಮಂಡ್ಯ: ಕೊರೋನಾಗೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಸೋಂಕಿತನ ಸಾವನ್ನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಪಿ. ಮಂಚೇಗೌಡ ಸ್ಪಷ್ಟಪಡಿಸಿದ್ದಾರೆ.
ಮದ್ದೂರಿನಲ್ಲಿ ವಾಸವಿದ್ದ 55 ವರ್ಷದ ವ್ಯಕ್ತಿ ಮೃತ ಕೊವಿಡ್ 19ನಿಂದ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕೊವಿಡ್ 19 ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು. ವಾಲೆಂಟಿಯರ್ ಆಗಿ ಅಂತ್ಯಕ್ರಿಯೆಯಲ್ಲಿ ಕೆಲಸ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಜಿಲ್ಲಾಡಳಿತದಿಂದ ಟೀಂ ರೇಡಿ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಗುರುತಿಸಿರುವ ಮಂಡ್ಯ ತಾಲ್ಲೂಕಿನ ಯತ್ತಗದಹಳ್ಳಿಯ 8 ಎಕರೆ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆ ಜಾಗದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಲಾಗಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮೃತ ವ್ಯಕ್ತಿಗೆ ಭಾನುವಾರ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.ಈ ವೇಳೆ ಕೊವಿಡ್ ಟೆಸ್ಟ್ ಮಾಡಿಸಿದ್ದು ಕೊರೋನಾ ಪಾಸಿಟಿವ್ ಬಂದಿದೆ. ಮೈಸೂರಿಂದ ಮಂಡ್ಯದ ಕೊವಿಡ್ ಆಸ್ಪತ್ರೆಗೆ ಕರೆತಂದ ಸ್ವಲ್ಪ ಸಮಯದಲ್ಲೇ ಸೋಂಕಿತ ಅಸುನೀಗಿದ್ದಾನೆ.
ಸಂಸದೆಗೂ ಪಾಸಿಟಿವ್; ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಕೊರೋನಾ ಭೀತಿ!.
ಸಂಸದೆ ಸುಮಲತಾಗೆ ಕೊರೋನಾ ದೃಢ ಹಿನ್ನೆಲೆಯಲ್ಲಿ ಮಂಡ್ಯದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಬೆಂಬಲಿಗರು ಸಾರ್ವಜನಿಕರಿಗೂ ಕೊರೋನಾ ಆತಂಕ ಶುರುವಾಗಿದೆ.
ಜೂ. 30ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಮಂಡ್ಯ ಡಿಸಿ ಸೇರಿ ಹಲವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾಸ್ಕ್ ಧರಿಸದೆ ವೇದಿಕೆಯಲ್ಲಿ ಕುಳಿತಿದ್ದ ವಿಡಿಯೋ ವೈರಲ್ ಆಗಿದ್ದು, ಇದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರ ಆತಂಕ ಹೆಚ್ಚಿಸಿದೆ.
ಡಿಸಿ ಕಚೇರಿ ಸ್ಯಾನಿಟೈಸ್.