ಹೆಚ್​ಡಿಕೆ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಕ್ಕೆ ಸಿಲ್ವರ್ ಗಿಡಗಳನ್ನು ಕಡಿದ ರೈತ..!

0
425

ಮಂಡ್ಯ : ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಕ್ಕೆ ಮಂಡ್ಯದ ರೈತ ತಾನು ಬೆಳೆದ ಸಿಲ್ವರ್ ಗಿಡಗಳನ್ನು ನಾಶ ಮಾಡಿದ್ದಾರೆ.
ಕುಮಾರಸ್ವಾಮಿಯವರು ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ನಾನು 1 ಎಕರೆಯಲ್ಲಿ ಜಮೀನಿನಲ್ಲಿ ಬೆಳೆದ ಸಿಲ್ವರ್ ಗಿಡಗಳನ್ನು ಕಡಿದು ಹಾಕ್ತೀನಿ ಅಂತ ಚಾಲೆಂಜ್​ ಮಾಡಿದ್ದ ರೈತ ಸಿಎಂ ಸ್ಥಾನದಿಂದ ಹೆಚ್​ಡಿಕೆ ಕೆಳಗಿಳಿಯುತ್ತಿದ್ದಂತೆ ಸಿಲ್ವರ್ ಗಿಡಗಳನ್ನು ಕಡಿದು ಹಾಕಿದ್ದಾರೆ. ಹೆಚ್​ಡಿಕೆ ಅಂತವರನ್ನ ಅಧಿಕಾರದಿಂದ ಇಳಿದಮೇಲೆ ಇನ್ಯಾರು ಆಡಳಿತ ನಡೆಸುತ್ತಾರೆ? ಕುಮಾರಸ್ವಾಮಿಗೆ ಮತ್ತಷ್ಟು ನೋವುಕೊಡ್ಬೇಡಿ ಅಂತ ಆ ರೈತ ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here