Home P.Special ಕೊರೋನಾ ನಿಯಂತ್ರಣಕ್ಕೆ ಮಂಡ್ಯ ಡಾಕ್ಟರ್ ವಿನೂತನ ಪ್ರಯೋಗ | ಆ ಡಿಫ್ರೆಂಟ್ ಐಡಿಯಾ ಏನ್...

ಕೊರೋನಾ ನಿಯಂತ್ರಣಕ್ಕೆ ಮಂಡ್ಯ ಡಾಕ್ಟರ್ ವಿನೂತನ ಪ್ರಯೋಗ | ಆ ಡಿಫ್ರೆಂಟ್ ಐಡಿಯಾ ಏನ್ ಗೊತ್ತಾ?

ಮಂಡ್ಯ: ಕೊರೋನಾ ನಿಯಂತ್ರಣಕ್ಕಾಗಿ ಮಂಡ್ಯದ ವೈದ್ಯರೊಬ್ಬರು ವಿನೂತನ‌ ಪ್ರಯೋಗ ಮಾಡಿದ್ದಾರೆ. ತನ್ನ ಖಾಸಗಿ ಕ್ಲಿನಿಕ್​ನಲ್ಲಿ ತಪಾಸಣೆಗೆ ಬರುವವರಿಗೆ ಸೋಡಿಯಂ ಹೈಪೋ ಕ್ಲೋರೈಡ್ ಬಳಸಿ ಸ್ಯಾನಿಟೈಸ್ ಸ್ಪ್ರೇ‌ ಮಾಡುತ್ತಿದ್ದಾರೆ. ಡ್ರಾಪ್ಲೆಟ್ ಚೇಂಬರ್ ಕೇರ್ ನಲ್ಲಿ ಕೂರಿಸಿ ತಪಾಸಣೆ ಮತ್ತು ಪರಿಶೀಲನೆ ಮಾಡುವ ಮೂಲಕ ಪ್ರಾಥಮಿಕ ಹಂತದಲ್ಲೇ ಕೊರೋನಾ ನಿಯಂತ್ರಣ ಮಾಡಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.
ಹೌದು! ಅಂದ್ಹಾಗೆ ಇವರ ಹೆಸರು ಡಾ. ಪ್ರಶಾಂತ್ ಈಶ್ವರ್. ಇವರು ಮಂಡ್ಯ ನಗರದ ಪ್ರಸಿದ್ದ ರೇಡಿಯಾಲಜಿಸ್ಟ್ ಆಗಿದ್ದು, ನಗರದಲ್ಲಿ ಅನುಷಾ ಡಯಾಗ್ನೋಸ್ಟಿಕ್ ಸೆಂಟರ್ ಇಟ್ಟುಕೊಂಡಿದ್ದು, ಬಹಳ ಪ್ರಸಿದ್ದಿಯಾಗಿದ್ದಾರೆ. ಕೊವಿಡ್​ನಿಂದಾಗಿ ಬಹುತೇಕ ಡಯಾಗ್ನೋಸ್ಟಿಕ್ ಸೆಂಟರ್ ಮುಚ್ಚಿವೆಯಾದರೂ, ಇವರು ಮಾತ್ರ ಮುಚ್ಚಿಲ್ಲ. ಹಾಗಂತ ಇವರಿಗೆ ಕೊರೋನಾ ಭಯ ಇಲ್ಲ ಅಂತಲ್ಲ. ಇವರಿಗೂ ಭಯವಿದ್ರು, ಇವರು ಇದರಿಂದ ತಪ್ಪಿಸಿಕೊಳ್ಳಲು ತಮ್ಮದೇ ಅನುಭವದ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.
ಇವರು ರೋಗಿಗಳ ತಪಾಸಣೆ ಮಾಡುವ ಕೊಠಡಿಗೆ ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ನೀರಿನೊಂದಿಗೆ ಸೋಡಿಯಂ ಹೈಪೋಕ್ಲೋರೈಡ್ ರಾಸಾಯನಿಕ ಬಳಸಿ ಸ್ಯಾನಿಟೈಸ್ ಸ್ಪ್ರೇ‌ ಮಾಡಿಸಿಕೊಂಡು ಆ ಕೊಠಡಿಯಲ್ಲಿ ಬಂದ ರೋಗಿಗಳ ತಪಾಸಣೆ ಮಾಡ್ತಿದ್ದಾರೆ.
ಹೈಪೋ ಕ್ಲೋರೈಡ್ ಬಳಕೆಯ ಉಪಯೋಗ ಏನು?:
ಇದರಿಂದ ಬಹುತೇಕ ಕೊರೋನಾ ಪ್ರಾಥಮಿಕ ಲಕ್ಷಣಗಳಾದ ನೆಗಡಿ, ತಲೆನೋವು, ಗಂಟಲು ಕೆರೆತ ಹೊಂದಿದ್ದರೆ ಈ ಸೋಡಿಯಂ ಹೈಪೋ ಕ್ಲೋರೈಡ್ ಸೇವನೆಯಿಂದ ಗುಣಮುಖರಾಗ್ತಾರೆ ಅನ್ನೋದು ಇವರ ಅಭಿಪ್ರಾಯ. ಅಲ್ಲದೇ ಇದು ನನ್ನ ಅನುಭವಕ್ಕೆ ಬಂದಿದ್ದು ಅಂತಾರೆ ಈ ರೇಡಿಯಾಲಜಿಸ್ಟ್ ವೈದ್ಯ.
ವಿಶೇಷ ಡಿಸಿಸಿ ಕೊಠಡಿ ನಿರ್ಮಾಣ:
ಇನ್ನು ಇದಕ್ಕಾಗಿ ಇವರು‌ ತಮ್ಮ ಕ್ಲಿನಿಕ್​ನಲ್ಲಿ DCC (ಡ್ರಾಪ್ಲೆಟ್ ಚೇಂಬರ್ ಕೇರ್)
ಕೊಠಡಿ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಸ್ಪ್ರೇ ಮೂಲಕ ಸಿಂಪಡಿಸಲಾದ ಸೋಡಿಯಂ ಹೈಪೋಕ್ಲೋರೈಡ್ ಅನ್ನು ಇಲ್ಲಿಗೆ ಬಂದವರು ಸೇವಿಸಿದಾಗ ಶ್ವಾಸಕೋಸದಲ್ಲಿನ ಉಸಿರಾಟದ ಸಮಸ್ಯೆ ಸಲೀಸಾಗಿದೆ. ಸಣ್ಣ ಸಣ್ಣ ಮೈಕ್ಲೋಪೇಟ್ ಗಳಾಗಿ ಈ ರಾಸಾಯನಿಕ ಸೇವನೆ ಮಾಡುವುದು ಆರೋಗ್ಯಕ್ಕೆ ಉಪಯುಕ್ತವಾಗಲಿದೆ.
ದೊಡ್ಡ ಪ್ರಮಾಣದಲ್ಲಿ ಇದರ ಸೇವನೆ ಅಪಾಯವಾದರೂ ಮೈಕ್ರೋ ಪ್ಲೇಟ್ ಸೇವನೆ ನೆಗಡಿ, ತಲೆನೋವು, ಗಂಟಲು ಕೆರೆತ ಓಡಿಸುವ ಗುಣ ಹೊಂದಿಯಂತೆ. ಇದರಿಂದ ಯಾವುದೇ ಅಡ್ಡಪರಿಣಾಮ ಕೂಡ ಆಗಲ್ಲವೆಂದು ಈ ವೈದ್ಯರು ತಿಳಿಸಿದ್ದು, ಇದು ಸ್ವಂತ ಅನುಭವದ ಆಧಾರದ ಮೇಲೆ ಕಂಡುಕೊಂಡಿರೋದಾಗಿ ಹೇಳಿದ್ದಾರೆ.
ಸರ್ಕಾರ ಮತ್ತಷ್ಟು ಸಂಶೋಧನೆ ನಡೆಸಲಿ:
ಇದನ್ನು ಸರ್ಕಾರ ಮತ್ತಷ್ಟು ಸಂಶೋಧನೆ ನಡೆಸಿ ಕ್ವಾರೆಂಟೀನ್ ಮತ್ತು ಕೊವಿಡ್ ವಾರ್ಡ್ ನಲ್ಲಿ ಈ ವಿಧಾನ ಅನುಸರಿಸಿದ್ರೆ ಕೊರೋನಾಗೆ ಕಡಿವಾಣ ಹಾಕಲು ಇದು ರಾಮಬಾಣವಾಗಬಹುದೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ, ಮಂಡ್ಯದ ಈ ವೈದ್ಯ ತನ್ನ ಅನುಭವದ ಮೂಲಕ ಕಂಡುಕೊಂಡಿರುವ ಈ ವಿಧಾನವನ್ನು  ತನ್ನ ಕ್ಲಿನಿಕ್ ನಲ್ಲಿ ಪ್ರಯೋಗ ಮಾಡ್ತಿದ್ದಾರೆ. ಇಲ್ಲಿಗೆ ಬರುವ ಬಹುತೇಕ ರೋಗಿಗಳು ಮತ್ತು ಜನರು ಈ ಹೊಸ ವಿಧಾನದಿಂದ ತಮಗಿದ್ದ ತಲೆನೋವು, ಗಂಟಲು ಕೆರೆತ, ನೆಗಡಿ ಇಲ್ಲಿನ ಕೊಠಡಿಗೆ ಬಂದ ಮೇಲೆ ಹೋಗಿದೆ ಎನ್ನುತ್ತಿದ್ದಾರೆ.
ಸರ್ಕಾರ ಈ ವಿಧಾನವನ್ನು‌ ತಜ್ಞರ ಸಲಹೆ ಪಡೆದು ಕೊವಿಡ್ ಕಡಿವಾಣಕ್ಕೆ ಬಳಸಲಿ ಅನ್ನೋದು ಪ್ರಶಾಂತ್ ಈಶ್ವರ್​ ಸಲಹೆ. ಸರ್ಕಾರ ಈ ಸಲಹೆಯನ್ನು ಎಷ್ಟರ ಮಟ್ಟಿಗೆ ಸ್ವೀಕರಿಸಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

– ಡಿ.ಶಶಿಕುಮಾರ್, ಮಂಡ್ಯ

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments