ಗೋ ಬ್ಯಾಕ್​ ಡಿಕೆಶಿ ಹೋರಾಟಕ್ಕೆ ನಿರ್ಧಾರ

0
268

ಮಂಡ್ಯ: ಗೋ ಬ್ಯಾಕ್ ಡಿಕೆಶಿ ಹೋರಾಟ ನಡೆಸಲು ಮಂಡ್ಯ ಕಾಂಗ್ರೆಸಿಗರು ನಿರ್ಧರಿಸಿದ್ದಾರೆ. “ಕಾಂಗ್ರೆಸ್ ಪಕ್ಷ ಸಂಘಟನೆಗೆ ಬಂದ್ರೆ ಡಿಕೆಶಿಗೆ ಸ್ವಾಗತ, ಬದಲು ಜೆಡಿಎಸ್​ ಏಜೆಂಟ್​ ಆಗಿ ಬಂದರೆ ಹೋರಾಟ ಮಾಡಲಾಗುತ್ತದೆ” ಅಂತ ಮಂಡ್ಯ ಕಾಂಗ್ರೆಸಿಗರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಈಗಾಗಲೇ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಮುಂದಾಗಿದ್ದು, ಮೈತ್ರಿಯಿಂದ ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ. ​ಮಂಡ್ಯ ಕೈ​ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಡಿಕೆಶಿಗೆ ಹೊಣೆ ನೀಡಲಾಗಿದ್ದು, ಶಿವಕುಮಾರ್ ಮಂಡ್ಯದಲ್ಲಿ ಕಾಂಗ್ರೆಸ್​ ಮುಖಂಡರ ಸಭೆ ನಡೆಸಲು ಮುಂದಾಗಿದ್ದಾರೆ. ಜೆಡಿಎಸ್ ಏಜೆಂಟ್ ಆಗಿ ವರ್ತಿಸುತ್ತಿರುವುದಾಗಿ ಡಿಕೆಶಿ ವಿರುದ್ಧ ನಗರಸಭೆ ಮಾಜಿ ಸದಸ್ಯ ಅನಿಲ್​ ಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಸ್ಪರ್ಧೆಗೆ ಮಂಡ್ಯ ಕಾಂಗ್ರೆಸ್​ ಮುಖಂಡರು ಈಗಾಗಲೇ ಬೆಂಬಲ ತೋರಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ತಲೆ ನೋವಾಗಿ ಪರಿಣಮಿಸಲಿದೆ. ಕಾಂಗ್ರೆಸ್​ ಕೂಡಾ ಸುಮಲತಾ ಅವರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದು, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here