Saturday, October 1, 2022
Powertv Logo
Homeರಾಜ್ಯಮ್ಯಾನೆಜ್ಮೆಂಟ್ ಒಳಜಗಳ; ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರ

ಮ್ಯಾನೆಜ್ಮೆಂಟ್ ಒಳಜಗಳ; ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರ

ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಏರಿಯಾಗೊಂದು ಶಿಕ್ಷಣ‌ ಸಂಸ್ಥೆ ಹುಟ್ಟಿಕೊಳ್ತಿವೆ.‌ ಇಂಥದೇ ಸಾಲಿನಲ್ಲಿ ಪ್ರತಿಷ್ಠಿತ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪರಿಸ್ಥಿತಿ ಉಕ್ರೇನ್ ಹಾಗೂ ರಷ್ಯಾ ದೇಶಗಳ ಯುದ್ಧದ ನಡುವೆ ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿಯಂತಾಗಿದೆ. ಮ್ಯಾನೇಜ್ಮೆಂಟ್ ಒಳಜಗಳದಲ್ಲಿ 60 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿ ತಲುಪಿದೆ.‌

ಕಳಸಾಪುರ ರೋಡ್​ನಲ್ಲಿರೋ ಕಾಲೇಜಿಗೆ ನುಗ್ಗಿದ ವಿದ್ಯಾರ್ಥಿಗಳು ಹಾಗೂ ಪಾಲಕರು ನ್ಯಾಯ ಕೊಡಿಸುವಂತೆ ಆಡಳಿತಾಧಿಕಾರಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ಇತ್ತೀಚಿಗೆ ಕಾಲೇಜಿನ ಪ್ರಿನ್ಸಿಪಾಲ್ ಡಿ ಬಿ ಪಾಟೀಲ್ ಅವರು ಶ್ರೀಮತಿ ಶಕುಂತಲಾ ಪಾಟೀಲ್ ನರ್ಸಿಂಗ್ ಸೈನ್ಸ್ ಅನ್ನೋ ಹೊಸದೊಂದು ಕಾಲೇಜು ಆರಂಭಿಸಿದ್ದಾರೆ. ಅಲ್ಲದೆ ದಾಖಲಾತಿಯಲ್ಲಿ ಕಳಸಾಪುರ ರೋಡ್​ನಲ್ಲಿರುವ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ವಿಳಾಸವನ್ನೇ ನೀಡಿದ್ದಾರೆ ಅನ್ನೋ ಆರೋಪವಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ.

ಒಂದೇ ಬಿಲ್ಡಿಂಗ್​ನಲ್ಲಿ ಎರಡು ಕಾಲೇಜು ನಡೆಸ್ತಿರೋ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ಮಾತ್ರ ನಮ್ಮ ಗಮನಕ್ಕೆ ಬಂದಿದೆ. ಆಗ ಡಿಬಿ ಪಾಟೀಲ್ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ್ದೇವೆ ಅಂತಾ ವಿಬಿ ಹುಬ್ಬಳ್ಳಿ ಹೇಳ್ತಿದ್ದಾರೆ. ಸದ್ಯ ಆರೋಗ್ಯದ ಸಮಸ್ಯೆ ಹೇಳಿ ಡಿಬಿ ಪಾಟೀಲ್ ಕೈಗೆ ಸಿಗ್ತಿಲ್ಲವಂತೆ. ಆದ್ರೆ ಶಕುಂತಲಾ ಕಾಲೇಜಿನಲ್ಲಿ JNM ಅಂದ್ರೆ ಜನರಲ್ ಸರ್ಸಿಂಗ್ ಮಿಡ್ವೈಫ್ ಕೋರ್ಸ್ ಅಂತ. ಹೆರಿಗೆ ಶುಶ್ರೂಷೆ ಕೋರ್ಸ್​ಗೆ ದಾಖಲಾತಿ ಪಡೆದಿರೋ ವಿದ್ಯಾರ್ಥಿಗಳು ಇದೀಗ ಇವರಿಬ್ಬರ ಜಗಳದಲ್ಲಿ ಕಂಗಾಲಾಗಿದ್ದಾರೆ.

ಮ್ಯಾನೇಜ್ಮೆಂಟ್ ಸಮಸ್ಯೆ ಏನೇ ಇರಲಿ ನಮ್ಮ ಭವಿಷ್ಯಕ್ಕೆ ತೊಂದ್ರೆ ಮಾಡ್ಬೇಡಿ ಅಂತ ವಿದ್ಯಾರ್ಥಿಗಳು ಹಾಗೂ ಪಾಲಕರು ತಮ್ಮ ಆತಂಕದ ಅಳಲನ್ನ ತೋಡಿಕೊಳ್ತಿದ್ದಾರೆ. ಶಿಕ್ಷಣ ಅನ್ನೋದನ್ನ ಕಮರ್ಷಿಯಲ್ ಬಿಸಿನೆಸ್ ಮಾಡಿಕೊಂಡಿರೋ ಇವತ್ತಿನ‌ ಕಾಲದ ಸಂಸ್ಥೆಗಳು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡದಿದ್ರೆ‌ ಸಾಕು.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

- Advertisment -

Most Popular

Recent Comments