Tuesday, January 25, 2022
Powertv Logo
Homeಆಧ್ಯಾತ್ಮಆಧ್ಯಾತ್ಮದ ಜೊತೆ ಮನುಷ್ಯ

ಆಧ್ಯಾತ್ಮದ ಜೊತೆ ಮನುಷ್ಯ

ಆಧ್ಯಾತ್ಮ ಕೇವಲ ಸನ್ಯಾಸಿ ಹಾಗು ಧರ್ಮಗುರುಗಳಿಗೆ ಮಾತ್ರ ಮೀಸಲಿಟ್ಟಿರುಂತಹ ವಿಷಯವೆಂದು ಇಂದಿನ ಕಾಲದ ಜನರು ಭಾವಿಸಿರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಆಧ್ಯಾತ್ಮ ಅಂದರೆ ಏನು ಎಂದು ಇನ್ನು ಕೆಲವರಿಗೆ ಗೊತ್ತೇ ಇರೋದಿಲ್ಲ. ಎಲ್ಲರಲ್ಲೂ ಮೂಡಿಸುವ ಒಂದು ಪ್ರಶ್ನೆಯೇನೆಂದರೆ ಆಧ್ಯಾತ್ಮ ಎಂದರೆ ಏನು ? ಇದರಿಂದ ಏನು ಪ್ರಯೋಜನೆ ಎಂದು ಎಲ್ಲರಲ್ಲೂ ಪ್ರಶ್ನೆಯಾಗಿಯೇ ಉಳಿದಿದೆ. ಆಧ್ಯಾತ್ಮವು ನಂಬಿಕೆ ಮತ್ತು ಆಚರಣೆಗಳಿಂದ ಕೂಡಿರುವಂರಹ ಒಂದು ಶಿಸ್ತು. ಇದರಿಂದ ಮನುಷ್ಯನಿಗೆ ತನ್ನ ಆಂತರಿಕ ಶಾಂತಿ ಪಡೆಯಲು ಸಾಧ್ಯವಾಗುತ್ತದೆ.

ಆಧ್ಯಾತ್ಮವು ಜನರಿಗೆ ಅಷ್ಟು ಬೇಗವಾಗಿ ಒಲಿಯುವುದಿಲ್ಲ, ಕೆಲವರು ಬೆಳಿಗ್ಗೆ ಬೇಗನೆ ಎದ್ದು ನಮಸ್ಕಾರ ಮಾಡಿ ಅಥವಾ ಧ್ಯಾನ ಮಾಡುವುದು ಅಥವಾ ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರೊಂದಿಗೆ ಜೀವನದ ಕೆಟ್ಟ ಹಾಗೂ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚುವುದು ಆಧ್ಯಾತ್ಮವೇ ಆಗಿರುತ್ತದೆ.

ಮನಸ್ಸಿನ ಶಾಂತಿ :

ಪ್ರತಿಯೊಬ್ಬರಿಗೂ ಮನಸ್ಸಿಗೆ ಶಾಂತಿ ಬೇಕು. ಅದರಲ್ಲೂ ಈ ಆಧುನಿಕ ಜಗತ್ತಿನಲ್ಲಂತೂ ಅತೀ ಅಗತ್ಯವಾಗಿರುತ್ತದೆ. ಯಾಕೆಂದರೆ ಇದು ತುಂಬಾ ಮುಂದುವರೆದಿರುವ ಜಗತ್ತಿನಲ್ಲಿ ಜನರು ಇನ್ನಷ್ಟು ಮುಂದುವರೆಯುತ್ತಲೇ ಇದ್ದಾರೆ. ಹಿಂದಿನ ಕಾಲದಲ್ಲಿ ಜನರು ಪ್ರಕೃತಿಗೆ ತುಂಬಾ ಹತ್ತಿರವಾಗಿದ್ದರು. ಗುರು ಹಾಗೂ ಗುರುಕುಲದ ಕಾಲದಲ್ಲಿ ಶಾಂತಿಯೂ ನೆಲೆಸಿತ್ತು, ಮತ್ತು ಆಧ್ಯಾತ್ಮ ಎನ್ನುವುದು ಜೀವನದ ಮಾರ್ಗವಾಗಿತ್ತು. ಧ್ಯಾನ ಮಾಡುವ ಮೂಲಕ , ಆಧ್ಯಾತ್ಮಿಕ ಪುಸ್ತಕಗಳನ್ನು ಓದುದರಿಂದ , ಪುರಾಣಗಳ ಬಗ್ಗೆ ಇರುವ ಪ್ರವಚನಗಳನ್ನು ಕೇಳುದರಿಂದ ಮನಸ್ಸಿಗೆ ನೆಮ್ಮದಿಯನ್ನು ನೀಡುತಿತ್ತು.

ಒಳ್ಳೆಯ ಮನಸ್ಸು ಮತ್ತು ಶಾಂತಿಯುತ ಸಂಬಂಧ :

ಒಳ್ಳೆಯ ಮನಸ್ಸು ಏನೆಂದರೆ ಇನ್ನೊಬ್ಬರಿಗೆ ಕೆಡುಕನ್ನು ಬಯಸದೇ ಇರುವುದು. ಇತರರ ಬಗ್ಗೆ ಅಪಪ್ರಚಾರ ಮಾಡದೇ ಇರುವುದರಿಂದ ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಆದರೆ ಮನುಷ್ಯರು ಯಾವುದೋ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ದಿನಾಲೂ ಮನದಲ್ಲೇ ಕೊರಗುತ್ತಿರುತ್ತಾನೆ. ಆದ್ದರಿಂದ ಯಾರಿಗೂ ಹಾನಿ ಹಾಗದ ಹಾಗೆ ಸರಿಯಾದ ಹಾದಿಯಲ್ಲಿ ಮುನ್ನಡೆದರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಮನದಲ್ಲಿ ಶಾಂತಿ ನೆಮ್ಮದಿ ಇದ್ದರೆ ಆಗ ಒಳ್ಳೆಯ ನಿರ್ಧಾರ ಮತ್ತು ಧನಾತ್ಮಕ ಅಲೋಚನೆಗಳು ಬರಲು ಸಾಧ್ಯವಾಗುತ್ತದೆ.

 

ಪುಸ್ತಕಗಳ ಮೂಲಕ ಬುದ್ಧಿಮತೆಯನ್ನು ಹೆಚ್ಚಿಸಬಹುದು :

ಪುಸ್ತಕಗಳನ್ನು ಓದಿದರೆ ನಮ್ಮ ಬುದ್ಧಿಮತೆಯನ್ನು ಹೆಚ್ಚಿಸಬಹುದು. ಜೀವನದಲ್ಲಿ ಹಲವಾರು ಸಲ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಂದ ಭಾವನಾತ್ಮಕವಾಗಿ ಏನಾದರೂ ನಿರೀಕ್ಷೆ ಮಾಡಿದರೆ ಅದು ಈಡೇರುವುದಿಲ್ಲ. ಆಗ ಮನುಷ್ಯನು ನಿರಾಶೆಗೊಳಗಾಗುತ್ತಾನೆ. ಇತರರು ಹೇಗಿದ್ದಾರೋ ಅದರಂತೆಯೇ ಅವರನ್ನು ಸ್ವೀಕರಿಸಿ ಮತ್ತು ನಮ್ಮ ಆಯ್ಕೆಯಂತೆ ಅವರನ್ನು ಪರಿವರ್ತಿಸುವುದನ್ನು ನಿರೀಕ್ಷೆ ಮಾಡಬೇಡಿ ಎಂದು ಪುಸ್ತಕಗಳಿಂದ ಓದಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ದಿನನಿತ್ಯ ಆಗುಹೋಗುವಂತಹ ಕೆಲವೊಂದು ವಿಚಾರಗಳ ಬಗ್ಗೆ ನಾವು ಆಧ್ಯಾತ್ಮಿಕ ಪುಸ್ತಕಗಳಿಂದ ಕಲಿತುಕೊಳ್ಳಬಹುದು. ಪುಸ್ತಕಕ್ಕೆ ಅವಲಂಬಿತವಾದರೆ ಅವರಿಗೆ ಅದರಿಂದ ಯಾವುದೇ ನಿರಾಶೆಯಾಗುವುದಿಲ್ಲ.

ಪವಿತ್ರ ,ಪವರ್​ ಟಿವಿ

- Advertisment -

Most Popular

Recent Comments