ಗ್ರಾಮಕ್ಕೇ ನೀರುಣಿಸುವ ‘ಸದಾಶಿವ’, ಇವರು ಆಧುನಿಕ ಭಗೀರಥ..!

0
293

ಬಾಗಲಕೋಟೆ: ಅದು ಎತ್ತರ ಪ್ರದೇಶದಲ್ಲಿರುವ ಗ್ರಾಮ. ಆ ಗ್ರಾಮದಲ್ಲಿ ಸರ್ಕಾರ ಅದೆಷ್ಟೋ ಬೋರವೆಲ್ ಕೊರೆಸಿದ್ರೂ ಹನಿ ನೀರು ಬಂದಿರಲಿಲ್ಲ. ಆದ್ರೆ ಆ ಗ್ರಾಮದಲ್ಲೊಬ್ಬ ಕರುಣಾಮಯಿ ಇಡೀ ಗ್ರಾಮದ ನೀರಿನ ಸಮಸ್ಯೆಯನ್ನೇ ನೀಗಿಸಿದ್ದಾರೆ. ತಮ್ಮ ಮನೆಯ ಬೋರ್​ವೆಲ್​ ನೀರನ್ನು ಗ್ರಾಮಕ್ಕೇ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ. ಅವರೇ ಗ್ರಾಮದ ಜನರ ದಾಹ ಕಳೆದ ನೀರುಣಿಸುವ ಸದಾಶಿವ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮರಕಟ್ಟಿ ಗ್ರಾಮವಿದೆ. ಈ ಗ್ರಾಮವು ಎತ್ತರ ಪ್ರದೇಶದಲ್ಲಿದ್ದು, ಬಂಡೆಕಲ್ಲು, ಅಂತರ್ಜಲದ ಕುಸಿತದಿಂದಾಗಿ ಜನರು ಕುಡಿಯೋ ನೀರಿಗಾಗಿ ಪರಿತಪ್ಪಿಸುತ್ತಿದ್ದರು. ಮರಕಟ್ಟಿ ಗ್ರಾಮದಲ್ಲಿ ಈ ಹಿಂದೆ ಸರ್ಕಾರದ ವತಿಯಿಂದ ಅದೇಷ್ಟೋ ಬೋರೆವೆಲ್​ಗಳನ್ನು ಕೊರೆಸಿದರೂ ನೀರು ಮಾತ್ರ ಬಂದಿರಲಿಲ್ಲ. ಆದ್ರೆ ಮರಕಟ್ಟಿ ಗ್ರಾಮದಲ್ಲಿರುವ ಸದಾಶಿವ ಮರಡ್ಡಿ ಎಂಬ ರೈತರೊಬ್ಬರು  ತಮ್ಮ ಬೋರ್​ವೆಲ್​​ ನೀರನ್ನು ಕಳೆದ 3 ವರ್ಷಗಳಿಂದ ಗ್ರಾಮಸ್ಥರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಸದಾಶಿವ ತಮ್ಮ ಹೊಲದಿಂದ ಅರ್ಧ ಕಿಲೋಮೀಟರ್​​ ಪೈಪ್​ಲೈನ್​ ಅಳವಡಿಸಿ ಅಲ್ಲಿಂದ ಗ್ರಾಮದಲ್ಲಿರುವ ಜಲಸಂಗ್ರಾಲಯಕ್ಕೆ ನೀರು ಪೂರೈಸಲಾಗುತ್ತಿದೆ.

ಮರಕಟ್ಟಿ ಗ್ರಾಮದಲ್ಲಿ ಸದಾಶಿವ ಅವರು ನೀರು ಕೊಡುವ ಸದಾಶಿವ ಎಂದೇ ಖ್ಯಾತಿ ಹೊಂದಿದ್ದಾರೆ. ಸದಾಶಿವ ಗುರಡ್ಡಿ ಗ್ರಾಮ ಸೇರಿದಂತೆ ಮುಧೋಳ್​​​ ತಾಲೂಕಿನ ನಾಲ್ವರು ರೈತರು ಗ್ರಾಮಸ್ಥರಿಗೆ ಉಚಿತವಾಗಿ ನೀರು ಪೂರೈಸುವುದನ್ನು ಗುರುತಿಸಿದ ಬಾಗಲಕೋಟೆ ಜಿಲ್ಲಾಡಳಿತ ಸದಾಶಿವ ಅವರನ್ನು ಸನ್ಮಾನಿಸಲು ನಿರ್ಧರಿಸಿದೆ. ಮರಕಟ್ಟಿ ಗ್ರಾಮಸ್ಥರು ಸದಾಶಿವ ಮರಡ್ಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಸರ್ಕಾರ ಬೋರ್​ವೆಲ್​ ತೆಗಿಸಿ ವಿಫಲಗೊಂಡಿದ್ರೂ ಸದಾಶಿವ ಮರಡ್ಡಿ ತಮ್ಮ ಬೋರ್​ವೆಲ್​ ಮುಖಾಂತರವೇ ಗ್ರಾಮಸ್ಥರಿಗೆ ಉಚಿತ ನೀರು ಪೂರೈಸಿ, ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.

ನಿಜಗುಣ ಮಠಪತಿ, ಬಾಗಲಕೋಟೆ

LEAVE A REPLY

Please enter your comment!
Please enter your name here