Home ರಾಜ್ಯ ಇತರೆ ಮಗನನ್ನು ಕೊಲ್ಲಲು ತಂದೆಯಿಂದಲೇ ಸುಪಾರಿ..!

ಮಗನನ್ನು ಕೊಲ್ಲಲು ತಂದೆಯಿಂದಲೇ ಸುಪಾರಿ..!

ಕೊಪ್ಪಳ: ಆಸ್ತಿಗಾಗಿ ಸ್ವಂತ ಮಗನಿಗೇ ಸುಪಾರಿ ನೀಡಿದ ಘಟನೆ ಕೊಪ್ಪಳದಲ್ಲಿ ನೆಡದಿದೆ. ಕೊಪ್ಪಳದ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್​​ನಲ್ಲಿ ಶ್ರೀರಾಮಮೂರ್ತಿ ಎಂಬುವವರು ಆಸ್ತಿಗಾಗಿ ತಮ್ಮ‌ ಮಗ ವೆಂಕಟೇಶ್​ಗೆ ಸುಪಾರಿ ನೀಡಿದ್ದಾರೆ.

ಪಿತ್ರಾರ್ಜಿತ ಆಸ್ತಿಯನ್ನು ಮಗನಿಗೆ ತಿಳಿಸದೆ ಕಾರಟಗಿಯ ವಾಣಿಜ್ಯೋದ್ಯಮಿ ವಿ.ಬಿ ಚಿನಿವಾಲ ಅವರಿಗೆ ನೀಡಿ ಇದೀಗ ಚಿನಿವಾಲರೊಂದಿಗೆ ಸೇರಿಕೊಂಡು ಸ್ವಂತ ಮಗ ಮತ್ತು ಸೊಸೆಯ ಮೇಲೆ ಹಲ್ಲೆ ನಡೆಸಿ ಜೀವ ಬೇದರಿಕೆ ಹಾಕುತ್ತಿದ್ದಾರೆ. ಒಟ್ಟು20 ಎಕರೆ ನೀರಾವರಿ ಪ್ರದೇಶ ಗದ್ದೆ ಮತ್ತು ಒಂದು‌ ಮನೆಯನ್ನು ಸಹ ಮಗನಿಗೆ ತಿಳಿಸದೆ ಮಾರಾಟ ಮಾಡಲಾಗಿದೆ.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಾರು ವರ್ಷಗಳಿಂದ ಬಳ್ಳಾರಿಯಲ್ಲಿ ನೆಲೆಸಿದ್ದ ವೆಂಕಟೇಶ್​ ಮರಳಿ ಗ್ರಾಮಕ್ಕೆ‌ ಬಂದಾಗ ವಿಷಯ ತಿಳಿದಿದೆ. ಈ ಸಂಬಂಧ ಮೆಳ್ಳುಪುಡಿ ವೆಂಕಟೇಶ ಕೊರ್ಟ್ ಮೊರೆಹೋಗಿದ್ದಾರೆ. ಈ ಬಗ್ಗೆ ಕೊರ್ಟ್ ಇನ್ನೂ ಯಾವುದೇ ತೀರ್ಪು ನೀಡಿಲ್ಲ. ಆದರೆ ಆಸ್ತಿ ಪಡೆದಿರುವ ಕಾರಟಗಿಯ ವಿ.ಬಿ ಚಿನಿವಾಲ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಬಂದು ವೆಂಕಟೇಶ ಕುಟುಂಬದ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾರೆ. ಸಮೀಪದ ಕಾರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಟಾಚಾರಕ್ಕೆ ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಿಲ್ಲ ಅಂತ ವೆಂಕಟೇಶ ಮತ್ರು ದಂಪತಿಗಳು ಅಸಮಾಧಾನ ವ್ಯಕ್ತಪಡಿಸಿದದ್ದಾರೆ. ಆಸ್ತಿ ವಿಚಾರ ಕೋರ್ಟ್​ನಲ್ಲಿದೆ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿರ್ತೀವೆ. ಆದರೆ ನಮಗೆ‌ ಅಲ್ಲಿ ತನಕ ರಕ್ಷಣೆ ಕೊಡಿ‌ ಎಂದು ದಂಪತಿಗಳು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments