ವಾಷಿಂಗ್ಟನ್ : ಕೊರೋನಾ ಸೋಂಕು ಹರಡುತ್ತಿದ್ದಂತೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಇಲ್ಲದೆ ಜನ ಆಚೆ ಬರುವಂತಿಲ್ಲ. ಆದ್ರೆ, ಕೆಲವರು ತಮಗೂ ಈ ನಿಯಮಗಳಿಗೂ ಸಂಬಂಧವಿಲ್ಲ ಅನ್ನೋ ಹಾಗೆ ಮಾಸ್ಕ್ ಹಾಕಿಕೊಳ್ಳದೆ ಆರಾಮಾಗಿ ಓಡಾಡ್ಕೊಂಡ್ ಇದ್ದಾರೆ.
ಅಮೆರಿಕಾದಲ್ಲಿ ಒಂದೆಡೆ ಮಾಸ್ಕ್ ಧರಿಸಬೇಕು ಅಂತ ಬೆಂಬಲ ಸೂಚಿಸುವವರು ಒಂದೆಡೆಯಾದ್ರೆ, ಅದಕ್ಕೆ ವಿರೋಧ ವ್ಯಕ್ತಪಡಿಸೋರು ಇನ್ನೊಂದೆಡೆ! ಹೀಗಿರುವಾಗ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದವರಿಗೆ ಅದನ್ನು ತೊಡಿಸೋ ಮಷೀನ್ ಪರಿಚಯಿಸಿದ್ದಾನೆ.
“ಮಾಸ್ಕ್ ಧರಿಸದೇ ಓಡಾಡುವವರ ಮುಖಕ್ಕೆ ಮಾಸ್ಕ್ಗಳನ್ನು ಬ್ಲಾಸ್ಟ್ ಮಾಡಬಲ್ಲ ಯಂತ್ರವನ್ನು ನಮ್ಮ ಹುಡ್ಗ ಕಂಡುಹಿಡಿದಿದ್ದಾನೆ’’ ಅಂತ ಮಾಜಿ ಬ್ಯಾಸ್ಕೆಟ್ಬಾಲ್ ಪ್ಲೇಯರ್ ರೆಕ್ಸ್ ಚಾಪ್ಮ್ಯಾನ್ ತಿಳಿಸಿದ್ದಾರೆ.
ರೆಕ್ಸ್ ಚಾಪ್ ಮ್ಯಾನ್ ಶೇರ್ ಮಾಡಿರೋ ವಿಡಿಯೋದಲ್ಲಿ, ಮಷೀನ್ ಮುಂದೆ ನಿಂತ ಆ್ಯಲೆನ್ ಪ್ಯಾನ್ ಎಂಬ ವ್ಯಕ್ತಿ 3 … 2… …1 ಅಂತ ಎಣಿಸುತ್ತಿದ್ದಂತೆ ಆ ಯಂತ್ರ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹೊಡೆಯುತ್ತದೆ..! ಮುಖಕ್ಕೆ ಅಪ್ಪಳಿಸಿದ ಮಾಸ್ಕ್ ಸರಿಯಾಗಿ ಆ ವ್ಯಕ್ತಿಯ ಮುಖದ ಮೇಲೆ ಕೂರುತ್ತದೆ! ಈ ಯಂತ್ರಕ್ಕೆ ಕ್ಯಾರನೇಟರ್ ಅಂತ ಹೆಸರಿಡಲಾಗಿದೆ. ಕ್ಯಾರೆನ್ ಅಂದ್ರೆ ಅಮೆರಿಕಾದಲ್ಲಿ ಮಾಸ್ಕ್ ಹಾಕಿಕೊಳ್ಳಲು ವಿರೋಧಿಸುವ ಮಂದಿಯನ್ನು ಸೂಚಿಸುವ ಪದವಾಗಿದೆ.
My man invented “The Karenator”. A machine to blast masks onto mask-less people.
Hilarious…🤣🤣🤣pic.twitter.com/bzSsy7vhXy
— Rex Chapman🏇🏼 (@RexChapman) August 17, 2020