ಗ್ರೆನೇಡ್ ದಾಳಿ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

0
108

ಶ್ರೀನಗರ: ಜಮ್ಮುವಿನಲ್ಲಿ ನಿನ್ನೆ ನಡೆದಿರುವ ಗ್ರೆನೇಡ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಅನಂತನಾಗ್ ಜಿಲ್ಲೆಯ ಮತ್ತಾನ್ ಗ್ರಾಮದ ಮೊಹಮದ್ ಶ್ರೀನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಿನ್ನೆ ಜಮ್ಮುವಿನ ಬಸ್​ ನಿಲ್ದಾಣದಲ್ಲಿ ಗ್ರೆನೇಡ್​ ದಾಳಿ ಸಂಭವಿಸಿದಾಗ ಉತ್ತರಖಂಡದ ಬಾಲಕ ಮೊಹಮದ್ ಶಾರೀಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆಯಲ್ಲಿ ಇಲ್ಲಿಯವರೆಗೂ 32 ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದವರಲ್ಲಿ ಐವರ ಸ್ಥಿತಿ ಗಂಭೀರವಾಗಿತ್ತು. ಘಟನೆಯ ಹಿಂದೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here