ಉಸೇನ್ ಬೋಲ್ಟ್​​​​ ವೇಗವನ್ನೇ ಮೀರಿಸಿ ದಾಖಲೆ ಬರೆದ ಕಂಬಳ ಓಟಗಾರ!

0
543

ಉಸೇನ್​ ಬೋಲ್ಟ್​.. ವಿಶ್ವದ ಅತೀ ವೇಗದ ಓಟಗಾರ. ಅವರು ಮಾಡಿರುವ ರೆಕಾರ್ಡ್​ಗಳನ್ನು ಮುರಿಯಲು ಸಾಧ್ಯವೇ ಇಲ್ಲ ಎಂದವರಿಗೆ ಇಲ್ಲೊಬ್ಬ ಓಟಗಾರ ಚಮಕ್​ ಕೊಟ್ಟಿದ್ದಾರೆ..! ಬೋಲ್ಟ್​ ಅವರ ವೇಗವನ್ನೇ ಮೀರಿದ ವೇಗದ ಓಟಗಾರ ನಮ್ಮ ಕರಾವಳಿಯ ಕಂಬಳ ಮಾಂತ್ರಿಕ.

ಕರಾವಳಿಯ ಜಾನಪದ ಕ್ರೀಡೆ ಕಂಬಳ.  ಈ ಕಂಬಳದ ಅಂಗಳದಲ್ಲಿ ಕೋಣಗಳ ಹಿಂದೆ ಚಿಗರೆಯಂತೆ ಓಡುತ್ತಾ ಶ್ರೀನಿವಾಸ ಗೌಡ ಇದೀಗ ಸಧ್ಯ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 

ಕಂಬಳ ಕ್ರೀಡೆಯ ಓಟಗಾರ ಈ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ  ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವದಾಖಲೆಯ ಸರದಾರ ಉಸೇನ್​ ಬೋಲ್ಟ್ ಅಥ್ಲೆಟಿಕ್ಸ್​ ಟ್ರಾಕ್​ನಲ್ಲಿ 100 ಮೀ ಓಟವನ್ನು  9.58 ಸೆಕೆಂಡುಗಳಲ್ಲಿ ಓಡಿ ಗುರಿಮುಟ್ಟಿದ್ದರೆ ಈ ಶ್ರೀನಿವಾಸ ಗೌಡ ಕೆಸರು ತುಂಬಿರುವ ಕಂಬಳ ಗದ್ದೆಯಲ್ಲಿ ಕೋಣಗಳ ಜೊತೆ 100 ಮೀಟರ್​ ಓಟವನ್ನು ಕೇವಲ 9.55 ಸೆಕೆಂಡ್​ಗಳಲ್ಲಿ ಪೂರ್ಣಗೊಳಿಸಿದ್ದಾರೆ! 

LEAVE A REPLY

Please enter your comment!
Please enter your name here