ಸಿಜೆಐ ಹೆಸರಲ್ಲಿ ಸಿಜೆಗೆ ಫೇಕ್ ಕಾಲ್..!

0
198

ಬೆಂಗಳೂರು : ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್ ಅವರ ಹೆಸರಲ್ಲಿ ಕರ್ನಾಟಕ ಹೈಕೋರ್ಟ್​ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್​.ನಾರಾಯಣ ಸ್ವಾಮಿ ಅವರಿಗೆ ಅನಾಮಧೇಯನೊಬ್ಬ ಕರೆ ಮಾಡಿ ಜಡ್ಜ್​ಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇನ್​ಫ್ಲುಯೆನ್ಸ್​ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸಿಜೆಐ ಗೊಗೊಯ್ ಅವರ ಆಪ್ತಕಾರ್ಯದರ್ಶಿ ಹೆಚ್.ಕೆ ಜುನೇಜಾ ಹೆಸರಿನಿಂದ ಪರಿಚಯಿಸಿಕೊಂಡ ಆ ಅನಾಮಧೇಯ, ಹೈಕೋರ್ಟ್​ ಜಡ್ಜ್​ಗಳ ನೇಮಕಕ್ಕೆ ಶಿಫಾರಸ್ಸು ಮಾಡಿ, ಇಬ್ಬರು ವಕೀಲರ ಹೆಸರನ್ನು ಸಿಜೆ ಎಲ್​.ನಾರಾಯಣ ಸ್ವಾಮಿ ಅವರಿಗೆ ತಿಳಿಸಿದ್ದಾನೆ. ಸದ್ಯ ಇದು ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಿಜೆಐ ಅವರು ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಅನಾಮಧೇಯ ವ್ಯಕ್ತಿಯ ಕರೆ ಹಿನ್ನೆಲೆಯಲ್ಲಿ ಸಿಜೆ ಎಲ್​.ನಾರಾಯಣ ಸ್ವಾಮಿ ಅವರು ಸೋಮವಾರ ಮಧ್ಯಾಹ್ನ 12ಗಂಟೆಗೆ ಕೋರ್ಟ್​ ಕಲಾಪ ಮೊಟಕುಗೊಳಿಸಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಹೈಕೋರ್ಟ್​ನ ಸಿಜೆಗೆ ಬಂದಂತೆಯೇ ತೆಲಂಗಾಣ ಸಿಜೆ ಟಿ.ಬಿ ರಾಧಾಕೃಷ್ಣನ್ ಅವರಿಗೂ ಅನಾಮಧೇಯ ವ್ಯಕ್ತಿಯಿಂದ ಕರೆ ಹೋಗಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here