Home ರಾಜ್ಯ ಬೆಂಗಳೂರು ಜಾಗ ನಿಮ್ಮದೇ, ಮನೆ ಬೇರೆಯವರು ಕಟ್ಟಬಹುದು - ಬೆಂಗಳೂರಿಗರೇ ಎಚ್ಚರ..!

ಜಾಗ ನಿಮ್ಮದೇ, ಮನೆ ಬೇರೆಯವರು ಕಟ್ಟಬಹುದು – ಬೆಂಗಳೂರಿಗರೇ ಎಚ್ಚರ..!

ಬೆಂಗಳೂರು: ಜಾಗ ನಿಮ್ಮದೇ ಆಗಿದ್ರೂ, ಅಲ್ಲಿ ಬೇರೆಯವರು ಮನೆ ಕಟ್ಟಿ ನಿಮ್ಮನ್ನು ಯಾಮಾರಿಸಬಹುದು. ಬೆಂಗಳೂರಿಗರೇ ಹುಷಾರ್​..! ಸುಳ್ಳು ದಾಖಲೆ ಸೃಷ್ಟಿಸುವ ಖತರ್ನಾಕ್​ ಖದೀಮರು ಬೆಂಗಳೂರಿನಲ್ಲಿದ್ದಾರೆ. ನಿಮ್ಮದೇ ಜಮೀನಿನಲ್ಲಿ ಮನೆ ಕಟ್ಟಿ, ನಿಮನ್ನೇ ಯಾಮಾರಿಸುವ ವಮಚಕರು ನಿಮ್ಮ ಜಾಗ, ನಿಜಕ್ಕೂ ನಿಮ್ಮದೇನಾ ಅನ್ನೋ ಗೊಂದಲ ತಂದಿಡಬಹುದು.

ಈ ರೀತಿ ಬೆಂಗಳೂರಿನ ನಾಗಾವರದಲ್ಲಿ ಲಕ್ಷ್ಮಿ ನಾರಾಯಣ ಎಂಬವರಿಗೆ ಮೋಸ ನಡೆದಿದ್ದು, ಖದೀಮರಿಗೆ ಪಾಲಿಕೆಯ ಅಧಿಕಾರಿಗಳೇ ಸಾಥ್ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಲಕ್ಷ್ಮಿ ನಾರಾಯಣಗೆ ಸೇರಿದ್ದ ಜಾಗದಲ್ಲಿ ಜಯಪ್ರಕಾಶ್​ ಎಂಬವರಿಂದ ಕಟ್ಟಡ ನಿರ್ಮಾಣವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅಕ್ರಮವಾಗಿ ಜಯಪ್ರಕಾಶ್​ ಪಾಯ ಹಾಕಿಸಿಕೊಂಡಿದ್ದಾರೆ. ಜಯಪ್ರಕಾಶ್ ಅಕ್ರಮವಾಗಿ ದಾಖಲೆ ಸೃಷ್ಟಿಸಿದ್ದಾರೆಂದು ಲಕ್ಷ್ಮಿ ನಾರಾಯಣ ಆರೋಪ ಮಾಡಿದ್ದಾರೆ. ಮೂಲ ದಾಖಲೆಗಳಿದ್ರೂ ಸೈಟ್​ ಕೈತಪ್ಪುತ್ತಿರೋದಕ್ಕೆ ಲಕ್ಷ್ಮಿನಾರಾಯಣ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸ್ಪಂದಿಸ್ತಿಲ್ಲ, ಅವರೂ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಲಕ್ಷ್ಮಿನಾರಾಯಣ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments