ಆಗ್ರಾ: ಕಿಲ್ಲರ್ ಕೊರೋನಾ ವೈರಸ್ಗೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಕೊರೋನಾ ಹರಡುವುದನ್ನು ತಡೆಯಲು ವಿಶ್ವದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಆದರೆ ಅದೆಷ್ಟು ಪ್ರಯತ್ನಪಟ್ಟರೂ ಈ ಮಹಾಮಾರಿ ಹಾವಳಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆಯಲ್ಲದೆ ಕಡಿಮೆಯಾಗುತ್ತಿಲ್ಲ. ಕೊರೋನಾ ಸೋಂಕಿಗೆ ಅದೆಷ್ಟೋ ಜನ ತುತ್ತಾಗಿದ್ದರೆ, ಇನ್ನೆಷ್ಟೋ ಜನ ಸಾವಿಗೀಡಾಗಿದ್ದಾರೆ. ಇನ್ನೂ ಅದೆಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದರೆ, ಇನ್ನು ಕೆಲವು ನಿರ್ಗತಿಕರಂತು ಮನೆ-ಮಠ ಇಲ್ಲದೆ ಒಂದು ಹೊತ್ತಿನ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.
ನಮ್ಮ ದೇಶದಲ್ಲಿರುವ ಬಡವರು, ನಿರ್ಗತಿಕರ ಕಷ್ಟಕ್ಕೆ ಸಾಕ್ಷಿಯಾಗಿದ್ದು ಈ ಒಂದು ದೃಶ್ಯ. ಹೌದು ಆಗ್ರಾದಲ್ಲಿ ನಿರ್ಗತಿಕನೊಬ್ಬ ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ತನ್ನಲ್ಲಿರುವ ಮಣ್ಣಿನ ಮಡಕೆಯಲ್ಲಿ ತುಂಬಿಕೊಳ್ಳುತ್ತಿರುತ್ತಾನೆ. ಅತ್ತ ನಾಯಿಗಳು ಆ ಹಾಲಿನಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತವೆ.
ಈ ಮನಕಲುಕುವ ದೃಶ್ಯ ಆಗ್ರಾದ ರಾಂಬಾಗ್ ಬಳಿಯ ಚೌರಾಹದಲ್ಲಿ ಕಂಡುಬಂದಿದೆ. ಬೆಳಗ್ಗೆ ಹಾಲನ್ನು ಕೊಂಡೊಯ್ಯಲು ಬಂದಿದ್ದ ವ್ಯಕ್ತಿಯೊಬ್ಬನ ಬೈಕು ಅಪಘಾತವಾಗಿ ಹಾಲಿನ ಪಾತ್ರೆ ರಸ್ತೆಯ ಮೇಲೆ ಬಿದ್ದು ಸುತ್ತಲೂ ಹರಡುತ್ತದೆ. ಆಗ ಹತ್ತಿರದಲ್ಲಿದ್ದ ನಾಯಿಗಳು ಚೆಲ್ಲಿದ ಹಾಲನ್ನು ಕುಡಿಯಲು ಬಂದವು. ಇದೇ ವೇಳೆ ಅಲ್ಲೇ ಇದ್ದ ವ್ಯಕ್ತಿಯೂ ಆಗಮಿಸಿ ರಸ್ತೆಯಲ್ಲಿದ್ದ ಹಾಲನ್ನು ತನ್ನ ಬಳಿಯಿದ್ದ ಮಡಕೆಗೆ ತುಂಬಿಸಿಕೊಳ್ಳುತ್ತಾನೆ. ಈ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದು, ಸದ್ಯ ಇದೀಗ ವೈರಲ್ ಆಗುತ್ತಿದೆ.
Lockdown Impact:
इंसान और जानवर साथ साथ दूध पीने लगे।
आज अगरा के रामबाग चौराहे पर एक दूध वाले की दूध की टंकी गिर गयी।फिर क्या हुआ खुद देखिए। pic.twitter.com/OWvNg8EFIe— Kamal khan (@kamalkhan_NDTV) April 13, 2020