Sunday, May 29, 2022
Powertv Logo
Homeರಾಜ್ಯಕೊರೋನಾ ಹಾವಳಿ ನಡುವೆ ಡ್ಯಾನ್ಸ್ ಮಾಡಿ ಉದ್ಧಟತನ ಮೆರೆದ ಶಂಕಿತ ವ್ಯಕ್ತಿ

ಕೊರೋನಾ ಹಾವಳಿ ನಡುವೆ ಡ್ಯಾನ್ಸ್ ಮಾಡಿ ಉದ್ಧಟತನ ಮೆರೆದ ಶಂಕಿತ ವ್ಯಕ್ತಿ

ಬೆಳಗಾವಿ: ಡೆಡ್ಲಿ ಕೋರೋನಾ ಸೋಂಕಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೆಹಲಿ ನಿಜಾಮುದ್ದೀನ್​ಗೆ ಹೋಗಿದ್ದವರಿಂದ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಬೆಳಗಾವಿಯಲ್ಲಿ ಮೂವರಿಗೆ ಸೋಂಕು ದೃಢವಾಗಿದೆ. ಇದರ ಬೆನ್ನಲ್ಲೆ ನಿಜಾಮುದ್ದೀನ್​ನಿಂದ ಬಂದ ಶಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಯ ಕ್ವಾರಂಟೈನ್​ನಲ್ಲಿ ‘ನಮಗೆ ಕೋವಿಡ್-19 ಬಂದಿದೆ‘ ಎಂದು ನಗುತ್ತಾ ಡ್ಯಾನ್ಸ್ ಮಾಡಿ ತನ್ನ ಉದ್ಧಟತನವನ್ನು ತೋರಿಸಿದ್ದಾನೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನು ಕ್ವಾರಂಟೈನ್​ನಲ್ಲಿರಿಸಲಾಗಿದ್ದು, ಅಲ್ಲಿ ಒಬ್ಬ ಶಂಕಿತ ವಿಡಿಯೋ ಮಾಡುತ್ತಿರುವಾಗ ಇನ್ನೊಬ್ಬ ಬಂದು ‘ಕೈ ಮುಗಿದು ನಮಗೆ ಕೋವಿಡ್-19 ಸೋಂಕು ಬಂದಿದೆ‘ ಎಂದು ಡ್ಯಾನ್ಸ್ ಮಾಡಿದ್ದಾನೆ. ದೇಶದಲ್ಲಿ ಎಲ್ಲರೂ ಈ ಮಹಾಮಾರಿ ಸೋಂಕಿನ ಹುಟ್ಟಡಗಿಸಲು ದಿನನಿತ್ಯ ಹೋರಾಡುತ್ತಿದ್ದರೆ, ಅದೆಷ್ಟೋ ಜನ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ. ಹಾಗಿರುವಾಗ ಇಲ್ಲಿ ಈತ ಕೊರೋನಾ ಬಗ್ಗೆ ಅಸಡ್ಡೆ ತೋರಿಸಿ ಕುಣಿದು ಕುಪ್ಪಳಿಸಿರುವುದು ಎಲ್ಲರಿಗೂ ಬೇಸರ ತರುವಂತಾದ್ದಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments

<