ಪ್ರಿಯತಮನಿಗೇ ವಿಷ ಉಣಿಸಿದ್ಲಾ ಈ ‘ವಿಷ’ಕನ್ಯೆ..?

0
177

ಮೈಸೂರು: ಸೆಲ್ಫಿ ವಿಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸಿದ್ದರಾಜು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾವಿನ ಬಗ್ಗೆ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷ ತಂದುಕೊಟ್ಟು, ಡೆತ್​​ನೋಟ್​​​ ಬರೆಸಿದ್ದಾಳೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್​​ನೋಟ್ ಬರೆಸಿ ವಿಷ ಕೊಟ್ಟಿದ್ದಾಳೆ ಅಂತ ಸೆಲ್ಫಿ ವಿಡಿಯೋದಲ್ಲಿ ಪ್ರಿಯತಮೆ ವಿರುದ್ಧ ಸಿದ್ದರಾಜು ಆರೋಪ ಮಾಡಿದ್ದಾರೆ. “ನನ್ನ ಸಾವಿಗೆ ಪ್ರಿಯತಮೆ, ಆಕೆಯ ಸಂಬಂಧಿಕರು ಕಾರಣ. ಪ್ರಿಯತಮೆಯನ್ನು ಜೈಲಿಗೆ ಕಳುಹಿಸಿ” ಅಂತ ಯುವಕ ವಿಡಿಯೋದಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here