Saturday, October 1, 2022
Powertv Logo
HomePower Specialಹಿಮಪಾತವಾದ್ರು ಪವಾಡ ಸದೃಶವಾಗಿ ಬದುಕುಳಿದ..!

ಹಿಮಪಾತವಾದ್ರು ಪವಾಡ ಸದೃಶವಾಗಿ ಬದುಕುಳಿದ..!

ಪರ್ವತಾರೋಹಣ ಅಂದ್ರೆ ಅದೊಂದು ರೋಮಾಂಚನಕಾರಿ ಅನುಭವ, ಕ್ಲಿಷ್ಟಕರವಾದ ಹಾದಿಗಳನ್ನ ಕಡಿದು, ಪರ್ವತ ಹತ್ತಲು ಸುಗಮವಾದ ದಾರಿ ಮಾಡಿಕೊಳ್ಳುವುದು. ಆಯಾ ತಪ್ಪಿ ಬೀಳದಂತೆ ನಡೆದು ಬಂದ ಹಾದಿಗಳನ್ನ ಹಗ್ಗವನ್ನ ಆಣಿಗೆ ನಾಟಿಸುವುದು, ಜಾರಿ ಬೀಳದಂತೆ ಎಚ್ಚರ ವಹಿಸಲು, ಲಯಬದ್ದವಾದ ಬಟ್ಟೆಯನ್ನ ಧರಿಸುವುದು ಹೀಗೆ ಪರ್ವತವನ್ನ ಹತ್ತಲು ಹಲವು ರೀತಿಯಾದ ನಿಯಮಗಳನ್ನ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ನಿಯಮಗಳನ್ನ ಸರಿಯಾದ ರೀತಿಯಲ್ಲಿ ಪಾಲಿಸಿದರೆ, ಯಾರು ಬೇಕಾದರು ಪರ್ವತಾರೋಹಣವನ್ನ ಮಾಡಬಹುದಾಗಿದೆ. ಹೀಗಾಗಿ ಇಂದು ಸಾಕಷ್ಟು ಜನ ಪರ್ವತರೋಹಿಗಳು ಹುಟ್ಟಿಕೊಂಡಿದ್ದಾರೆ. ಹೀಗೆ ಹುಟ್ಟಿಕೊಂಡ ಪರ್ವತಾರೋಹಿಗಳು ಯಾವುದೇ ನಿಯಮಗಳನ್ನ ಪಾಲಿಸದೆ ತಮಗೆ ಇಷ್ಟ ಬಂದ ಹಾಗೆ ಪರ್ವತಾರೋಹಣವನ್ನ ಮಾಡುತ್ತಾರೆ.

ಹೀಗೆ ಪರ್ವತಾರೋಹಣದ ನಿಯಮಗಳನ್ನ ಪಾಲಿಸದೆ ಪರ್ವತಾರೋಹಣ ದಾಟಿದ್ರೆ ಹಲವು ಆಪತ್ತುಗಳು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಾವಿನ ಮನೆಗೆ ಕೂಡ ತಲುಪಬೇಕಾಗುತ್ತದೆ. ಆದರೂ ಕೂಡ ಈ ಹಿಮ ಪರ್ವತಗಳ ಬಗ್ಗೆ ಎಚ್ಚೆತ್ತುಕೊಳ್ಳದೆ ಸಾಕಷ್ಟು ಜನ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾರೆ. ಈ ಮೂಲಕ ಹಲವು ಮಂದಿ ಸಾವನ್ನಪ್ಪಿರುವ ಬಗ್ಗೆ ಹಲವು ಬಾರಿ ವರದಿಗಳು ಕೂಡ ಇದೆ. ಹಿಮಾಪರ್ವಗಳು ಸಾಮಾನ್ಯ ಪರ್ವತಗಳ ಹಾಗೆ ಇರೋದಿಲ್ಲ. ಹಾಗಾಗಿ ಮಾಹಿತಿ ಇಲ್ಲದೆಯೇ ಸಾಕಷ್ಟು ಜನ ಹಿಮ ಪರ್ವತಗಳನ್ನ ಹತ್ತಲು ಹೋಗುತ್ತಾರೆ. ಈ ಮೂಲಕ ಹಲವು ಆಪಾಯಗಳನ್ನ ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಇನ್ನು ಹಿಮ ಪರ್ವತಗಳು ಸಾಮನ್ಯ ಪರ್ವತಗಳಂತೆ ಇರದೆ, ಮಂಜುಗಡ್ಡೆಯಿಂದ ಆವೃತವಾಗಿದ್ದು, ಇದನ್ನ ಹತ್ತೋದು ಸಾಮಾನ್ಯ ಜನರಿಂದ ಕೂಡ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ಇದೀಗ ಇಂತಹದ್ದೆ ಒಬ್ಬ ತಜ್ಞ ಹಾಗು ಪರಿಣಿತ ಪರ್ವತಾರೋಹಿ ಎಡವಟ್ಟು ನಿರ್ಧಾರವೊಂದನ್ನ ಮಾಡಿ, ತನ್ನ ಮೇಲೆ ಹಿಮಪಾತವಾಗುವಂತೆ ಮಾಡಿದ್ದಾನೆ. ಕೊಲೆರಾಡೋ ಮೂಲದ ಲೆಲ್ಯಾಂಡ್ ನಿಸ್ಕಿ, ಔರೆಯಲ್ಲಿನ ದಿ ರಿಬ್ಬನ್‌ನ ಎಂಬ ಪರ್ವತದ ಮೇಲ್ಭಾಗವನ್ನು ಏಕಾಂಗಿಯಾಗಿ ಏರುತ್ತಿದ್ದ, ಈ ವೇಳೆ ನೆಲದಿಂದ 400 ಅಡಿಗಳಷ್ಟು ಎತ್ತರದಲ್ಲಿ, ಭಾರಿ ಹಿಮಪಾತಕ್ಕೆ ಸಿಲುಕಿದ್ದಾನೆ. ಅದು ಸಾಲೋದಿಲ್ಲ ಅನ್ನೋ ಹಾಗೆ, ಪರ್ವತವೇರುವ ವೇಳೆ ಈತ ಯಾವುದೇ ಸುರಕ್ಷತ ಹಗ್ಗವನ್ನು ಇಟ್ಟುಕೊಂಡಿರಲಿಲ್ಲ. ಪರ್ವತವೇರ ಬೇಕಾದರೆ ಕೆಲವೊಮ್ಮೆ  ಹಿಮಪಾತವಾಗುವ ಸೂಚನೆಗಳು ಇರುತ್ತವೆಯಂತೆ,  ಹಾಗಾಗಿ ಹಿಮಪಾತದಂತಹ ಆಪತ್ತು ಇದ್ರೆ, ಅವುಗಳಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಜನ ಮೊದಲೇ ಪರ್ವತಾರೋಹಣ ಮಾಡದಂತೆ ನಿರ್ಧಾರವನ್ನ ತೆಗೆದುಕೊಂಡಿರುತ್ತಾರೆ.

ಆದ್ರೆ ಈತ ಮಾತ್ರ ಯಾವುದೇ ರೀತಿಯಾದ ಮುನ್ನೇಚ್ಚರಿಕೆಯನ್ನ ತೆಗೆದುಕೊಳ್ಳದೆ ಹಲವು ಆಪತ್ತುಗಳನ್ನ ತನ್ನ ಮೈಮೇಲೆಗೆ ಎಳೆದುಕೊಂಡಿದ್ದಾನೆ. ಕೆಲ ಹೊತ್ತು ತನ್ನ ತಪ್ಪಿನಿಂದ, ಹಿಮ ಪರ್ವತವನ್ನು ಏರಲು ಬಳಸುವ ಕೊಕ್ಕೆಯಂತಹ ಸಾಧನದಲ್ಲಿ ಆತ ನೇತಾಡುತ್ತಾ ಇದ್ದ, ಬಳಿಕ ಆತ ತನ್ನ ಚಲನೆಯಲ್ಲಿ ಕೊಂಚ ಪಥ ಬದಲಿಸಿ, ತಾನೇ ಬಗ್ಗಿಕೊಂಡು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಪರ್ವತಾರೋಹಿ ನಿಸ್ಕಿಯ ಕ್ಯಾಮೆರಾ ಹೆಲ್ಮೆಟ್, ಈ ಭಯಾನಕ ಘಟನೆಯನ್ನ ಸೆರೆಹಿಡಿದಿದೆ. ಇನ್ನು ಈ ಪರ್ವತರೋಹಣದಲ್ಲಿ ಅವರ ಕೆಲವೊಂದು ಎಡವಟ್ಟು ನಿರ್ಧಾರಗಳು ಆಪತ್ತನ್ನ ತಂದಿದ್ರು, ಕೂಡ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಅವರನ್ನ ಉಳಿಸಿಕೊಂಡಿದೆ ಅಂತ ಹೇಳಲಾಗ್ತಾ ಇದೆ.

ಲಿಖಿತ್​​​ ರೈ, ಪವರ್​​ ಟಿವಿ 

- Advertisment -

Most Popular

Recent Comments