ಅಮೇರಿಕಾ: ಹೋಟೆಲ್ಗೆ ಹೋದಾಗ ಬಿಲ್ ಪೇ ಮಾಡೇ ಮಾಡ್ತೀವಿ. ಹೋಟೆಲ್ಲವ್ರು ಯರ್ರಾ ಬಿರ್ರಿ ಬಿಲ್ ಹಾಕಿದ್ರೆ ಅಥವಾ ಹೆಚ್ಚು ಬಿಲ್ ಹಾಕಿದ್ರೆ ಸಹಜವಾಗಿ ಪ್ರಶ್ನೆ ಮಾಡ್ತೀವಿ. ಆದರೆ, ಯಾವತ್ತಾದ್ರೂ ನೀವು ತಿಂದಿದ್ದಕ್ಕೆ, ಪಾರ್ಸಲ್ ಕಟ್ಟಿಸಿಕೊಂಡಿದ್ದಕ್ಕೆ ಬಿಲ್ ಕಟ್ಟಿದ್ದು ಬಿಟ್ರೆ ಎಂದಾದ್ರೂ ಅನಾವಶ್ಯಕ ಮಾತಾಡಿದ್ದಕ್ಕೆ ಬಿಲ್ ಕಟ್ಟಿ ಬಂದಿದ್ದೀರಾ ? ಅಥವಾ ಹೋಟೆಲ್ಲವ್ರು ಬಿಲ್ ಹಾಕಿದ್ದಾರಾ?
ಆದ್ರೆ ಇಲ್ಲೊಂದು ಹೋಟೆಲ್ನಲ್ಲಿ ನಾನ್ಸೆನ್ಸ್ ಪ್ರಶ್ನೆ ಕೇಳಿದ್ದಕ್ಕೆ ಗ್ರಾಹಕನಿಗೆ ಎಕ್ಸ್ಟ್ರಾ ಬಿಲ್ ಹಾಕಿದೆ! ಎಲ್ಲಿ ಅಂತೀರಾ? ನಮ್ಮಲ್ಲೆಲ್ಲೂ ಅಲ್ಲ ಬಿಡಿ, ಅಮೆರಿಕಾದಲ್ಲಿ.
ಅಲ್ಲಿನ ಡೆನ್ವಿರ್ ರೆಸ್ಟೋರೆಂಟ್ಗೆ ಹೋದ ವ್ಯಕ್ತಿಗೆ ಬಿಲ್ ಕೊಡ್ಬೇಕಾದ್ರೆ ಊಟದ ಬಿಲ್ ಜೊತೆ ಸ್ಟುಪಿಡ್ ಪ್ರಶ್ನೆ ಕೇಳಿದ್ದಾನಂತ ಹೆಚ್ಚುವರಿ ಬಿಲ್ ಹಾಕಲಾಗಿದೆ. ಆ ಹೋಟೆಲ್ನಲ್ಲಿ ಅನಾವಶ್ಯಕವಾಗಿ ಪ್ರಶ್ನೆ ಮಾಡಿದ್ರೆ 0.38 ಡಾಲರ್ (27 ರೂಪಾಯಿ) ದಂಡದ ರೀತಿ ಬಿಲ್ ಕಟ್ಬೇಕಂತೆ.
ಸದ್ಯ ಸುದ್ದಿಯಲ್ಲಿರೋ ವ್ಯಕ್ತಿ ಅದೆಂಥಾ ಪ್ರಶ್ನೆ ಕೇಳಿದ್ನೋ ಗೊತ್ತಿಲ್ಲ. ಅದೇನೋ ಸ್ಟುಪಿಡ್ ಕ್ವೆಷನ್ ಕೇಳಿ ದಂಡ ಕಟ್ಟಿದ್ದಾನಂತ ವರದಿಯಾಗಿದೆ.