Saturday, October 1, 2022
Powertv Logo
Homeಸಿನಿಮಾಮಲಯಾಳಂನ ಖ್ಯಾತ ನಟಿ ಲಲಿತಾ ನಿಧನ

ಮಲಯಾಳಂನ ಖ್ಯಾತ ನಟಿ ಲಲಿತಾ ನಿಧನ

ಕೇರಳ : ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಲಲಿತಾ (74 ) ಅವರು ನಿಧನರಾಗಿದ್ದಾರೆ. ಕಳೆದು ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಫೆಬ್ರವರಿ 25, 1947 ರಂದು ಕೇರಳದಲ್ಲಿ ಜನಿಸಿದ್ದರು. ಲಲಿತಾ 1978ರಲ್ಲಿ ಫಿಲ್ಮ್‌ಮೇಕರ್ ‘ಭಾರತನ್’ ಅವರನ್ನು  ಮದುವೆಯಾಗಿದ್ದರು. ಹಿರಿಯ ನಟಿಯ ನಿಧನಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು, ಅಭಿಮಾನಿಗಳು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ‘ಕೇರಳ ಪೀಪಲ್ಸ್​ ಆರ್ಟ್​ ಕ್ಲಬ್​’ ರಂಗತಂಡದ ಮೂಲಕ ಅಭಿನಯ ಆರಂಭಿಸಿದ್ದ ಲಲಿತಾ ಅವರು ಪ್ರತಿಭಾವಂತ ನಟಿ ಆಗಿದ್ದರು.

1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದರು. ಹಲವು ಬಗೆಯ ಪಾತ್ರಗಳಿಂದ ಅವರು ಜನಮನ ಗೆದ್ದಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಲಲಿತಾ, ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸುತ್ತಿದ್ದರು. ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್​ ಪಡೆದುಕೊಂಡಿದ್ದ ಅವರು 1983ರಲ್ಲಿ ಕಮ್​ಬ್ಯಾಕ್​ ಮಾಡಿದ್ದರು.

ಆರವಂ, ಅಮರಂ, ಗಾಡ್ ಫಾದರ್, ಸಂದೇಶಂ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಲಲಿತಾ ಅವರು ಒಟ್ಟು ಆರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

- Advertisment -

Most Popular

Recent Comments