Home ರಾಜ್ಯ ಭಾರತದಲ್ಲಿಕೊವಿಡ್ ಹೆಚ್ಚಳಕ್ಕೆ ಕಾರಣವಾದ್ರೂ ಏನು?

ಭಾರತದಲ್ಲಿಕೊವಿಡ್ ಹೆಚ್ಚಳಕ್ಕೆ ಕಾರಣವಾದ್ರೂ ಏನು?

ಬೆಂಗಳೂರು: ದೇಶಾದ್ಯಂತ ಕೊವಿಡ್ ಎರಡನೇ ಅಲೆಯ ರ‍್ಭಟ ಮುಂದುವರೆದಿರುವ ಹಿನ್ನೆಲೆಯಲ್ಲಿ, ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೊರೋನಾ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಕೊವಿಡ್ ಬೆಡ್ಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ ಕೊವಿಡ್ ಸೋಂಕಿತ ವ್ಯಕ್ತಿಗಳಿಗೆ ಬೆಡ್ಗಳ ಕೊರತೆ ಕಾಡುತ್ತಿದೆ. ಬಿಬಿಸಿ ಸುದ್ದಿ ವಾಹಿನಿ ಭಾರತದಲ್ಲಿ ಕೊವಿಡ್ ಹರಡುವಿಕೆಯ ಕಾರಣಗಳ ಬಗ್ಗೆ ಬೆಳಕು ಚೆಲ್ಲಿದೆ. ಅವುಗಳನ್ನ ನೋಡೋದಾದ್ರೆ,
೧. ರಾಜ್ಯದಲ್ಲಿ ಉಪ ಚುನಾವಣೆ,
೨. ಸಾಮಾಜಿಕ ಅಂತರ ಪಾಲಿಸದೇ ಇರೋದು
೩. ಜನ ಮಾಸ್ಕ್ ಧರಿಸದೇ ಇರೋದು
೪. ಲಸಿಕೆ ಬಂದಿದೆ ಅಂತಾ ಜನರ ಬೇಕಾಬಿಟ್ಟಿ ತಿರುಗಾಟ
೫. ಮದುವೆ, ಹಬ್ಬಗಳು, ಜಾತ್ರೆಗಳು
೬. ಕ್ಲಬ್, ಪಬ್, ಸ್ವಿಮ್ಮಿಂಗ್ ಪೂಲ್ ಓಪನ್
೭. ಹಾಸ್ಟೆಲ್ ಗಳು ತುಂಬಿ ತುಳುಕುತ್ತಿರೋದು

ಜನರು ಸರಿಯಾಗಿ ಕೊವಿಡ್ ನಿಯಾಮವಳಿಗಳನ್ನ ಪಾಲಿಸುತ್ತಿಲ್ಲ. ಮದುವೆ, ಜಾತ್ರೆ ಹಾಗೂ ಇನ್ನಿತರ ಸಭಾ ಸಮಾರಂಭಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ನಿಯಮಗಳನ್ನ ಜನರು ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನು, ಉಪಚುನಾವಣೆಯ ಪ್ರಯುಕ್ತ, ರಾಜಕಾರಣಿಗಳ ಪ್ರಚಾರದ ಸಂದರ್ಭದಲ್ಲೂ ಸಹ ಹೆಚ್ಚಾಗಿ ಜನರು ಸೇರಿದ್ದರು. ಕೊವಿಡ್ ನಿಯಂತ್ರಿಸುವ ಸಲುವಾಗಿ ಹೋರಾಡುವ ರಾಜಕಾರಣಿಗಳೇ, ಕೊವಿಡ್ ಹಬ್ಬಲು ಕಾರಣಕರ್ತರಾಗಿದ್ದಾರೆ.

ಭಾರತದಲ್ಲಿ ಜನಸಂಖ್ಯೆ ಏನು ಕಡಿಮೆ ಇಲ್ಲ, ಆದ್ದರಿಂದ ಕೊವಿಡ್ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡಿದೆ. ಇತ್ತೀಚಿಗಷ್ಟೇ ಭಾರತದಲ್ಲಿ ಹೋಲಿ ಹಬ್ಬ ಸಹ ಆಚರಿಸಲಾಗಿತ್ತು. ಕೊವಿಡ್ ಮರೆತು, ಜನರು ಖುಷಿಯಾಗಿ ಸಮಾಜಿಕ ಅಂತರ ನಿರ್ಲಕ್ಷಸಿ ಹೋಲಿ ಆಚರಿಸಿದ್ದರು. ಕೊವಿಡ್ ರೂಪಾಂತರಿಯಿಂದಾಗಿಯೂ ಕೊವಿಡ್ ಪ್ರಕರಣಗಳು ಅಧಿಕವಾಗಿವೆ. ಜನರು ಕೊವಿಡ್ ರಿಪರ‍್ಟ್ ಇಲ್ಲದೆ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದರು. ಕೊವಿಡ್ ಕೇಸ್ ಉತ್ತುಂಗದಲ್ಲಿದ್ದಾಗ, ಭಾರತ ಕೊವಿಡ್ ಲಸಿಕೆ ವಿತರಿಸಲಿಲ್ಲ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಕೊರೊನಾ ಸೋಂಕು ಹರಡಲು ಇವೆಲ್ಲವೂ ಪ್ರಮುಖ ಕಾರಣಗಳಾಗಿವೆ.

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments