Monday, January 17, 2022
Powertv Logo
Homeತಂತ್ರಜ್ಞಾನಭಾರತದ ಮಾರುಕಟ್ಟೆಗೆ ಮಹಿಂದ್ರದಿಂದ ಮತ್ತೊಂದು ಎಸ್ ಯುವಿ

ಭಾರತದ ಮಾರುಕಟ್ಟೆಗೆ ಮಹಿಂದ್ರದಿಂದ ಮತ್ತೊಂದು ಎಸ್ ಯುವಿ

ಕಳೆದವಾರವಷ್ಟೇ ಆಲ್ಟುರಸ್​ ಜಿ4 ಎಸ್​​ಯುವಿ ಬಿಡುಗಡೆ ಮಾಡಿದ ಮಹೀಂದ್ರ ತನ್ನ ಮತ್ತೊಂದು ಹೊಸ ಎಸ್​ಯುವಿಯನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಎಸ್​201 ಕೋಡ್​ನೇಮ್​ ಇರುವಂತಹ ಈ ಎಸ್​ಯುವಿ ಕಾರಿನ ಹೆಸರನ್ನು ಡಿಸೆಂಬರ್​ 1ರಂದು ಬಹಿರಂಗಗೊಳಿಸಲಿದೆ.
ಕೊರಿಯನ್​ ಸ್ಯಾಂಗ್ಯಾಂಗ್ ಮಾಡೆಲ್​ ಮಾದರಿಯನ್ನು ಅವಲಂಬಿಸಿ ಭಾರತದ ತಂತ್ರಜ್ಱರು ಹೊಸ ಮಾಡೆಲ್​ ಹೊರತರುತ್ತಿದ್ದಾರೆ. ಬ್ರೆಝಾವನ್ನು ಹೊರತುಪಡಿಸಿ ಈ ಕಾರು ತನ್ನ ಸ್ಪೆಷಲ್​ ಫೀಚರ್​ಗಳಿಂದ ಫೋರ್ಡ್​ ಇಕೋಸ್ಪೋರ್ಟ್​ನ್ನು ಮೀರಿಸಲಿದ್ದು, ನುವೋಸ್ಪೋರ್ಟ್​ಗಿಂತ ಮುಂಚೂಣಿಯಲ್ಲಿ ನಿಲ್ಲಲಿದೆ.
ಈ ಕಾರು ಹಲವು ಸ್ವೆಷಲ್​ ಫೀಚರ್​ಗಳನ್ನು ಒಳಗೊಂಡಿದ್ದು ಕಾರು ಪ್ರಿಯರಿಗೆ ಕ್ರಿಸ್ಮಸ್​ ಉಡುಗೊರೆಯಾಗಿ ಮಾರುಕಟ್ಟೆಗೆ ಬರಲಿದೆ. ಆ್ಯಪಲ್​ ಫ್ಲೇಯವರ ಟಚ್​ಸ್ಕ್ರೀನ್​ ಇನ್ಫೋಟೈನ್​ಮೆಂಟ್​ನ್ನು ಕಾರಿನಲ್ಲಿ ಅಳವಡಿಸಲಾಗಿದ್ದು, ಸ್ಪಷ್ಟ ಮತ್ತು ಸುಮಧುರ ಸಂಗೀತವನ್ನೂ ಆಲಿಸಬಹುದಾಗಿದೆ. ಇನ್ನೂ ಮುಖ್ಯವಾಗಿ ನೀವಿರುವ ಸ್ಥಳದ ಹವಾಮಾನಕ್ಕನುಗುಣವಾಗಿ ನಿಮಗೆ ಕಂಫರ್ಟ್​ ಅನಿಸುವಂತಹ ವಾತಾವರಣವನ್ನು ನಿಮಗೆ ಒದಗಿಸಲಿದೆ. ಹಾಗೇ ಈ ಕಾರಿನಲ್ಲಿ ಮಲ್ಟಿ ಸ್ಟೀರಿಂಗ್​ ಚಕ್ರಗಳನ್ನು ಅಳವಡಿಸಲಾಗಿದೆ.
ಹಾಗೇ ಲೆದರ್ ಹಾಗೂ ಫಾಬ್ರಿಕ್​ ಸೀಟ್​ಗಳನ್ನು ಆರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಸ್ಟಾರ್ಟ್​-ಸ್ಟೋಪ್​ ಬಟನ್​, ಕ್ರೂಸ್ ಕಂಟ್ರೋಲರ್​, ರಿವರ್ಸ್​ ಪಾರ್ಕಿಂಗ್​​ ಕ್ಯಾಮೆರವನ್ನು ಒಳಗೊಂಡಿದೆ. ಸೇಫ್ಟಿಗೆ ಆದ್ಯತೆ ನೀಡುವ ಮಹೀಂದ್ರ ತನ್ನ ಹೊಸ ಕಾರಿನಲ್ಲಿ ಎಬಿಎಸ್​ ಹಾಗೂ ಇಬಿಡಿ ಗುಣಮಟ್ಟದ ಡ್ಯುವಲ್​ ಫ್ರಂಟ್​ ಏರ್​​ಬ್ಯಾಗ್​ಗಳನ್ನು ಅಳವಡಿಸಿದೆ.
ಸಾಮಾನ್ಯವಾಗಿ ಮಹೀಂದ್ರ ತನ್ನೆಲ್ಲ ಕಾರ್​ಗಳ ಹೆಸರನ್ನು ‘ಒ’ ಅಕ್ಷರದಲ್ಲಿ ಕೊನೆಗೊಳ್ಳುವಂತೆ ಗಮನವಿಡುತ್ತಿದ್ದು, ಈ ಹೊಸಕಾರಿಗೆ ಯಾವ ಹೆಸರಿಡಲಿದ್ದಾರೆಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments