Friday, October 7, 2022
Powertv Logo
Homeದೇಶಮಹಾರಾಷ್ಟ್ರ ಸಚಿವ ಜಿತೇಂದ್ರ ಅವಾದ್​ಗೆ ಕೊರೋನಾ ವೈರಸ್ ಪಾಸಿಟಿವ್

ಮಹಾರಾಷ್ಟ್ರ ಸಚಿವ ಜಿತೇಂದ್ರ ಅವಾದ್​ಗೆ ಕೊರೋನಾ ವೈರಸ್ ಪಾಸಿಟಿವ್

ಮುಂಬೈ: ದೇಶಾದ್ಯಂತ ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಲೇ ಇದೆ. ಇದೀಗ ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವಾದ್‌ಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದ್ದು, ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

ಜಿತೇಂದ್ರ ಅವರ ಸಿಬ್ಬಂದಿಗಳಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ತಾವೂ ಕೊರೋನಾ ತಪಾಸಣೆಯನ್ನು ಮಾಡಿಸಿಕೊಡಿದ್ದರು. ಅಲ್ಲದೆ ಏಪ್ರಿಲ್ 13 ರಿಂದ ಸೆಲ್ಫ್ ಕ್ವಾರಂಟೈನ್​ನಲ್ಲಿದ್ದರು. ಇದೀಗ ಕೊರೋನಾ ತಪಾಸಣೆಯ ರಿಪೋರ್ಟ್ ಬಂದಿದ್ದು, ಪಾಸಿಟಿವ್ ಬಂದಿದೆ.

ಜಿತೇಂದ್ರ ಅವರ ಮನೆ ಕೆಲಸದವರು ಹಾಗೂ ಅವರ ಭದ್ರಾತಾ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ತಾವು ಸೋಂಕಿತರೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದರಿಂದ ಇವರಿಗೂ ಸೋಂಕು ಹರಡಿದೆ.

ಇನ್ನು ದೇಶದಲ್ಲೇ ಸೋಂಕಿತರ ಪಟ್ಟಿಯಲ್ಲಿ  ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈವರೆಗೂ ಸುಮಾರು 6,427 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಈ ರಾಜ್ಯದಲ್ಲೇ 283 ಜನರು ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments