ಇಂದು ಮ.ಹ ಚುನಾವಣಾ ಫಲಿತಾಂಶ – ಬಿಜೆಪಿ ಗೆಲುವು ಖಚಿತ ಎಂದಿವೆ ಸಮೀಕ್ಷೆಗಳು -ಅಂತರದ ಲೆಕ್ಕಾಚಾರದ್ದೇ ಕುತೂಹಲ!

0
430

ನವದೆಹಲಿ : ಭಾರೀ ಕುತೂಹಲ ಮೂಡಿಸಿದ್ದ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಬಿಜೆಪಿ ಎರಡೂ ರಾಜ್ಯಗಳಲ್ಲಿ ಕಳೆದ ಚುನಾವಣೆಗಿಂತ(2014) ಹೆಚ್ಚಿನ ಸಾಧನೆಯ ತವಕದಲ್ಲಿದ್ದು, ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿಯೂ ಬಿಜೆಪಿಯದ್ದೇ ದರ್ಬಾರು ಅಂದಿವೆ.
ಕಳೆದ ಚುನಾವಣೆಯ ಲೆಕ್ಕಾಚಾರವನ್ನು ನೋಡೋದಾದ್ರೆ ಮಹಾರಾಷ್ಟ್ರದಲ್ಲಿ ಒಟ್ಟು 288 ಸ್ಥಾನಗಳಲ್ಲಿ ಎನ್​ಡಿಎಗೆ 185, ಯುಪಿಎಗೆ 83 ಮತ್ತು ಇತರೆ 20 ಸೀಟುಗಳು ಬಂದಿದ್ದವು. ಹರಿಯಾಣದಲ್ಲಿ 90 ಕ್ಷೇತ್ರಗಳಲ್ಲಿ ಎನ್​ಡಿಎ 48 ಕ್ಷೇತ್ರಗಳಲ್ಲಿ, ಯುಪಿಎ 15 ಕ್ಷೇತ್ರಗಳಲ್ಲಿ, ಇತರೆ 27 ಸ್ಥಾನಗಳು ಬಂದಿದ್ದವು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ -2 ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆಯಾದ್ದರಿಂದ ಈ ಚುನಾವಣೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇದು ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ದೊಡ್ಡ ಸವಾಲು ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ, ಬಿಜೆಪಿ ಗೆಲುವು ನಿಶ್ಚಿತ ಎಂದು ಸಮೀಕ್ಷೆಗಳು ಹೇಳಿವೆ. ಜಮ್ಮು -ಕಾಶ್ಮೀರಕ್ಕೆ ಸಂಬಂಧಿಸಿದ್ದ 370ನೇ ವಿಧಿ ರದ್ಧತಿ ಮತ್ತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ (ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್) ಇಮೇಜ್​ ಬಿಜೆಪಿ ಮತ್ತೊಂದು ಅವಧಿಗೆ ಮುಂದುವರೆಯಲು ಕಾರಣವಾಗಲಿವೆ ಎನ್ನುವುದು ರಾಜಕೀಯ ವಿಶ್ಲೇಷಣೆ.
ಒಟ್ಟಿನಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ಪಕ್ಕಾ ಆಗಿದ್ದು, ಗೆಲುವಿನ ಅಂತರ ಹೇಗಿರುತ್ತೆ? ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಅಚ್ಚರಿ ಗೆಲುಪಡೆಯುತ್ತಾರೆ ಅನ್ನೋದು ಮಾತ್ರ ಕುತೂಹಲ.

LEAVE A REPLY

Please enter your comment!
Please enter your name here