ನಾಳೆಗೆ ‘ಮಹಾ’ ಭವಿಷ್ಯ ಕಾಯ್ದಿರಿಸಿದ ಸುಪ್ರೀಂಕೋರ್ಟ್

0
269

ಸದ್ಯ ರಾಷ್ಟ್ರ ರಾಜಕಾರಣಲ್ಲಿ ‘ಮಹಾ’ ಪಾಲಿಟ್ರಿಕ್ಸ್​​ನದ್ದೇ ಸದ್ದು. ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್​ ನಾಳೆಗೆ ತೀರ್ಪನ್ನುಕಾಯ್ದಿರಿಸಿದೆ.
ಬಿಜೆಪಿ ಮತ್ತು ಎನ್​ಸಿಪಿ ಅಜಿತ್ ಪವಾರ್​ಗೆ ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​​​ ಇಂದು ಕೂಡ ಮುಂದುವರೆಸಿತು. ವಿಚಾರಣೆ ನಡೆಸಿದ ನ್ಯಾ. ಎನ್ ವಿ ರಮಣ, ನ್ಯಾ. ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಕಾಯ್ದಿರಿಸಿತು.
ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಸಿಎಂ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ವೇಳೆಯಲ್ಲಿ ಸಲ್ಲಿಸಿದ್ದ ಪತ್ರ ಮತ್ತು ರಾಜ್ಯಪಾಲರ ಪತ್ರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟಿಗೆ ಸಲ್ಲಿಸಿ, ವಾದ ಮಂಡಿಸಿದರು.
ಭಾನುವಾರ ತುರ್ತು ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಸರಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರು ನೀಡಿದ ಪತ್ರ ಹಾಗೂ ಫಡ್ನಿವಿಸ್‌ ರಾಜ್ಯಪಾಲರಿಗೆ ನೀಡಿದ ಬೆಂಬಲ ಪತ್ರವನ್ನು ಸಲ್ಲಿಸುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿತ್ತು.
ಇನ್ನು ಸರ್ಕಾರದ ಪರ (ಬಿಜೆಪಿ) ಮುಕುಲ್ ರೊಹ್ಟಗಿ, ಶಿವಸೇನಾ ಪರ ಕಪಿಲ್ ಸಿಬಲ್, ಎನ್​ಸಿಪಿ -ಕಾಂಗ್ರೆಸ್ ಪರ ಮನುಸಿಂಘ್ವಿ ವಾದ ಮಂಡಿಸಿದ್ರು. ವಾದ – ಪ್ರತಿವಾದ ಆಲಿಸಿದ ಕೋರ್ಟ್ ನಾಳೆ ‘ಮಹಾ’ ಭವಿಷ್ಯ ತಿಳಿಸಲಿದೆ.

LEAVE A REPLY

Please enter your comment!
Please enter your name here