Sunday, June 26, 2022
Powertv Logo
Homeರಾಜ್ಯಮಧು ನಾಪತ್ತೆ ದೂರು ದಾಖಲಿಸಿಕೊಳ್ಳದ ಪೊಲೀಸರು ಸಸ್ಪೆಂಡ್ - ಇದು ಪವರ್ ಟಿವಿ ಬಿಗ್ ಇಂಪ್ಯಾಕ್ಟ್

ಮಧು ನಾಪತ್ತೆ ದೂರು ದಾಖಲಿಸಿಕೊಳ್ಳದ ಪೊಲೀಸರು ಸಸ್ಪೆಂಡ್ – ಇದು ಪವರ್ ಟಿವಿ ಬಿಗ್ ಇಂಪ್ಯಾಕ್ಟ್

ರಾಯಚೂರು : ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ‘ಹತ್ಯಾಚಾರ’ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಧು ನಾಪತ್ತೆ ದೂರು ದಾಖಲಿಸಿಕೊಳ್ಳದ ಆರೋಪದಲ್ಲಿ ಇಬ್ಬರು ಪೊಲೀಸರು ಸಸ್ಪೆಂಡ್ ಆಗಿದ್ದಾರೆ. ಇದು ಪವರ್ ಟಿವಿಯ ಬಿಗ್ ಇಂಪ್ಯಾಕ್ಟ್.
‘ಜಸ್ಟಿಸ್​ ಫಾರ್​ ಮಧು’ಗಾಗಿ ರಾಯಚೂರಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಮಧು ನಾಪತ್ತೆಯಾದಾಗ ದೂರು ದಾಖಲಿಸಿಕೊಳ್ಳದ ರಾಯಚೂರಿನ ಸದರ್ ಬಜಾರ್ ಪೊಲೀಸ್​ ಠಾಣೆಯ ಪಿಎಸ್ಐ ಬಿ.ಬಿ. ಮರಿಯಮ್​ ಮತ್ತು ಕಾನ್ಸ್​ಟೇಬಲ್​ ಆಂಜನೇಯು ಅವರನ್ನು ಸಸ್ಪೆಂಡ್ ಮಾಡಿ ಎಸ್​ಪಿ ಕಿಶೋರ್​ ಬಾಬು ಆದೇಶ ಹೊರಡಿಸಿದ್ದಾರೆ.
ಮಧು ನ್ಯಾಯಕ್ಕಾಗಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ.. ದೊಡ್ಡ ಮಟ್ಟಿನ ಕೂಗು ಕೇಳಿಬಂದಿದೆ. ನಿಮ್ಮ ಪವರ್ ಟಿವಿ ಕೂಡ ಮಧು ನ್ಯಾಯಕ್ಕಾಗಿ ನಿರಂತರ ಸುದ್ದಿ ಪ್ರಸಾರ ಮಾಡುತ್ತಿದೆ. ಮಧು ಮತ್ತು ಅವರ ಕುಟುಂಬದ ಪರ ಧ್ವನಿ ಎತ್ತಿದೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments