ಕುಮಾರ್​ ಬಂಗಾರಪ್ಪ ಜೊತೆ ಮಧು ಬಂಗಾರಪ್ಪ ಜಗಳವೇ ಆಡಿಲ್ವಂತೆ..! : ಮಧು ಮನದಾಳದ ಮಾತು

0
335

ಶಿವಮೊಗ್ಗ :   ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಯಾವಾಗ ಬಿಜೆಪಿ ಸೇರಿದರೋ ಆಗ ಕುಮಾರ್ ಬಂಗಾರಪ್ಪ, ತಂದೆ ಜೊತೆ ಬರಲೇ ಇಲ್ಲ. ಅಲ್ಲಿಂದ ಬಂಗಾರಪ್ಪ ಕುಟುಂಬದಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿತು. ಅದು ಈಗ ಎಷ್ಟರ ಮಟ್ಟಿಗೆ ಅಂದರೆ ಕುಮಾರ್ ಮತ್ತು ಮಧು ಎಣ್ಣೆ ಸೀಗೆಕಾಯಿ ತರ ಆಗಿದ್ದಾರೆ. ಇಬ್ಬರು ಕಳೆದ 13 ವರ್ಷಗಳಿಂದ ಪರಸ್ಪರ ವಿರುದ್ಧದ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ.
ಬೇರೆ ಬೇರೆ ಪಕ್ಷಗಳಿಂದ ವಿರುದ್ಧವಾಗಿ ಪರಸ್ಪರ ಸ್ಪರ್ಧೆ ಮಾಡುತ್ತಾರೆ. ಮಧು ಬಂಗಾರಪ್ಪ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರೇ, ಮಧು ಸೋಲಿಗೆ ಕುಮಾರ್ ಟೊಂಕ ಕಟ್ಟಿ ಹೇಳಿಕೆ ನೀಡ್ತಾರೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡ್ತಾರೆ.
ಆದರೆ, ಇಂದು ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಬಗ್ಗೆ ಮಾತಾನಾಡಿದ್ದಾರೆ. ಅದೆನೆಂದರೆ, ನಾನು ಕುಮಾರ್ ಬಂಗಾರಪ್ಪ ಜೊತೆ ಯಾವತ್ತೂ ಜಗಳವೇ ಆಡಿಲ್ಲ. ಅವನು ಸುಮ್ಮನೇ ನನ್ನ ಬಗ್ಗೆ ಹೇಳಿಕೆಗಳನ್ನು ನೀಡುತ್ತಾನೆ. ತಂದೆ ಬಂಗಾರಪ್ಪ, ತಾಯಿ ಶಂಕುತಲಾ ಅವರ ಜೊತೆ ಕುಮಾರ್ ಬಂಗಾರಪ್ಪ ನಡೆದುಕೊಂಡ ಮತ್ತು ಅವರನ್ನು ನೋಡಿಕೊಂಡ ರೀತಿ ಸರಿಯಾಗಿರಲಿಲ್ಲ, ಆ ನೋವು ನನಗೆ ಇದೆ ಎಂದು ಮಧು ಹೇಳಿದ್ದಾರೆ.
ನಾವು ಮತ್ತೆ ಒಂದಾಗಬೇಕು ಅಂದ್ರೆ ತಂದೆ ಬಂಗಾರಪ್ಪ ಬರಬೇಕು. ಇದು ಅಸಾಧ್ಯ ಎನ್ನುವ ಮೂಲಕ ಈ ಜನ್ಮದಲ್ಲಿ ಇಬ್ಬರು ಒಂದಾಗುವುದು ಸಾಧ್ಯವಿಲ್ಲ ಎಂದರು. ಅಣ್ಣನಾಗಿ ಕುಮಾರ್ ಜವಬ್ದಾರಿ ನಿರ್ವಹಿಸಲಿಲ್ಲ. ನಮ್ಮ ತಂದೆಯೇ ಕುಮಾರ್ ವಿರುದ್ಧ ನನ್ನನ್ನು ಸ್ಪರ್ಧೆ ಮಾಡಿಸಿದ್ದರು. ತಂದೆಯ ಮಾತುಗಳಿಗೆ ಗೌರವ ನೀಡಲೇಬೇಕು. ತಂದೆ ತೀರ್ಮಾನ ಮಾಡಿದ ಮೇಲೆ ನಾನು ಹಿಂದೆ ಹೋಗಲು ಸಾಧ್ಯವಿರಲಿಲ್ಲ. ಅದರೆ, ಈಗಲೂ ಸಹೋದರ ಕುಮಾರ ಬಂಗಾರಪ್ಪ ಬಗ್ಗೆ ನನಗೆ ಗೌರವ ಇದೆ. ಕುಮಾರ್ ಬಂಗಾರಪ್ಪ ಸಚಿವ ಆಗಿದ್ದ ಸಮಯದಲ್ಲಿ ಕ್ಷೇತ್ರಕ್ಕೆ ಏನು ಮಾಡಲಿಲ್ಲ ಎಂದು ನಾನು ಹೇಳಿದರೆ, ನಾಳೆ ಮತ್ತೆ ಪತ್ರಿಕಾಗೋಷ್ಠಿ ಕರೆದು ನನ್ನ ಬಗ್ಗೆ ಹೇಳಿಕೆ ಕೊಡುತ್ತಾನೆ. ಕುಮಾರ್ ಬಂಗಾರಪ್ಪ ಎಂ.ಎಲ್.ಎ ಮತ್ತು ಸಚಿವನಾಗಲು, ಬಂಗಾರಪ್ಪನವರೇ ಕಾರಣ. ಅದರೆ ಕೊಟ್ಟ ಜವಬ್ದಾರಿಯನ್ನು ಕುಮಾರ್ ನಿಭಾಯಿಸಲಿಲ್ಲ ಎಂದು ಮಧು ಬಂಗಾರಪ್ಪ ಬೇಸರ ವ್ಯಕ್ತಪಡಿಸಿದರು.
ನಾನು ಸಹ ಬಂಗಾರಪ್ಪ ಮತ್ತು ಜೆಡಿಎಸ್ ಪಕ್ಷದ ಹೆಸರಿನ ಮೇಲೆಯೇ ಶಾಸಕನಾಗಿದ್ದು ಎಂದ ಮಧಯ, ಪ್ರತಿ ಬಾರಿ ಚುನಾವಣೆ ನಾನು ಸ್ಪರ್ಧಿಸಿದಾಗಲೂ, ಡೆಂಟಲ್ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸುತ್ತಾನೆ. ಆದರೆ, ಈಗ್ಯಾಕೋ ಪ್ರತಿಭಟಿಸಿಲ್ಲ. ಬೇಕಾದರೆ ಹೇಳಲಿ ಟೆಂಟ್ ಅಥವಾ ಶಾಮೀಯಾನ ಹಾಕಿಸಿಕೊಡುತ್ತೇನೆ ಅಂದರು.

LEAVE A REPLY

Please enter your comment!
Please enter your name here